ಭಾರತದಲ್ಲಿ ಜನಿಸಿದ ಪಾದ್ರಿಯೊಬ್ಬರನ್ನು ಚರ್ಚ್ ಆಫ್ ಇಂಗ್ಲೆಂಡ್‌ನ ಬಿಷಪ್ ಆಗಿ ನೇಮಕ ಮಾಡಲಾಗಿದೆ. ಲಂಡನ್‌ನ ಸೇಂಟ್ ಪೌಲ್ಸ್ ಕೆಥೆಡ್ರಲ್‌ನಲ್ಲಿ ಈ ನಿಮಿತ್ತ ಆಯೋಜಿಸಿದ್ದ ಸಮಾರಂಭವೊಂದರಲ್ಲಿ, 43 ವರ್ಷ ವಯಸ್ಸಿನ ರೆವರೆಂಡ್ ಮಲಾಯಿಲ್ ಲೂಕೋಸ್ ವರ್ಗೀಸ್ ಮುತಾಲಾಲಿ ಅವರನ್ನು ಪದೋನ್ನತಿ ಮಾಡಲಾಗಿದೆ.
ಲೀಸೆಸ್ಟರ್‌ನ ಸೇಂಟ್ ಮಾರ್ಕ್ಸ್ ಗಿಲ್ಲಿಂಗ್ಯಾಂನ ಡಯೋಸೀಸ್‌ರ ವಿಕಾರ್ ಆಗಿದ್ದ ವರ್ಗೀಸ್ ಮುಲಾತಲಿ ಅಲಿಯಾಸ್ ಸಂಜೂರ ಪದೋನ್ನತಿಗೆ ನವೆಂಬರ್ 2021ರಲ್ಲಿ ರಾಣಿ ಎಲಿಜ಼ಬೆತ್ 2 ಮಾನ್ಯತೆ ನೀಡಿದ್ದರು. ಇದಾದ ಬಳಿಕ ಸಂಜೂರ ಪದಗ್ರಹಣವನ್ನು 2022ಕ್ಕೆ ನಿಗದಿ ಮಾಡಲಾಗಿತ್ತು. ಕೊನೆಗೂ, ಜನವರಿ 25ರಂಧು ಸಂಜೂರನ್ನು ಕೇಂದ್ರ ಲಂಡನ್‌ನ ಲೌಬೊರೋದ ಬಿಷಪ್ ಆಗಿ ನೇಮಕ ಮಾಡಲಾಗಿದೆ.
ಸಮಾರಂಭವನ್ನು ಕ್ಯಾಂಟರ್‌ಬೆರಿಯ ಆರ್ಚ್ ಬಿಷಪ್ ಜಸ್ಟಿನ್ ವೆಲ್ಬೀ ನೇತೃತ್ವದಲ್ಲಿ ನಡೆಸಲಾಗಿದ್ದು, ಇದೇ ವೇಳೆ ಸಂಜೂ ಜೊತೆಗೆ ಲಿನ್ನೆ ಮತ್ತು ಲೂಸಾ ಎಂಬ ಇಬ್ಬರನ್ನು ಲೀಸೆಸ್ಟರ್‌ನ ಡಯೋಸಿಸ್‌ನಲ್ಲಿ ಬಿಷಪ್ ಆಗಿ ನೇಮಕ ಮಾಡಲಾಗಿದೆ.
ಕೇರಳದಲ್ಲಿ ಜನಿಸಿದ ಸಂಜೂ ಬೆಂಗಳೂರಿನ ಸದರ್ನ್ ಏಷ್ಯಾ ಬೈಬಲ್ ಕಾಲೇಜಿನಲ್ಲಿ ತಮ್ಮ ಶಿಕ್ಷಣ ಪೂರೈಸಿದ್ದಾರೆ. ಇದಾದ ಬಳಿಕ ಆಕ್ಸ್‌ಫರ್ಡ್‌ನ ಮಿನಿಸ್ಟ್ರೀ ಆಫ್ ವಿಕ್ಲಿಫ್‌ನಲ್ಲಿ ಸಂಜೂ ತರಬೇತಿ ಪಡೆದಿದ್ದಾರೆ. ಬ್ಲಾಕ್‌ಬರ್ನ್‌ನ ಡಯೋಸಿಸ್‌ನಲ್ಲಿ ಸೇಂಟ್ ಥಾಮಸ್ ಲಂಕಾಸ್ಟರ್‌ನಲ್ಲಿ ತಮ್ಮ ಮೊದಲ ಅವಧಿ ಪೂರೈಸಿದ್ದ ಸಂಜೂ 2009ರಲ್ಲಿ ಚರ್ಚ್ ಆಫ್ ಇಂಗ್ಲೆಂಡ್‌ನ ಪ್ರೀಸ್ಟ್ ಆಗಿ 2009ರಲ್ಲಿ ಪದೋನ್ನತಿ ಹೊಂದಿದ್ದರು. 90 ಹಾಗೂ 83 ವರ್ಷ ವಯಸ್ಸಾಗಿರುವ ಸಂಜೂರ ಹೆತ್ತವರು ಕೇರಳದ ಕೊಲ್ಲಂನಲ್ಲಿ ವಾಸಿಸುತ್ತಿದ್ದಾರೆ.