ಮುಂಬೈ: ದೇಶದ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಕಳೆದ 5 ವರ್ಷದ ಅವಧಿಯಲ್ಲಿ ದೇಶದ ಶ್ರೀಮಂತರ 10.6 ಲಕ್ಷ ಕೋಟಿ ರೂ.ಗೂ ಹೆಚ್ಚು ಸಾಲವನ್ನು ರೈಟ್ ಆಫ್ ಮಾಡಿವೆ. ಈ ಮೊತ್ತದಲ್ಲಿ ಶೇಕಡ 50ರಷ್ಟು ಸಾಲ ಬೃಹತ್ ಕಂಪನಿಗಳು ಪಡೆದ ಸಾಲವಾಗಿದೆ.
ಸುಮಾರು 2300 ಕಂಪನಿಗಳು ವಿವಿಧ ವಾಣಿಜ್ಯ ಬ್ಯಾಂಕುಗಳಿಂದ 5 ಕೋಟಿ ರೂಪಾಯಿಗೂ ಹೆಚ್ಚು ಸಾಲ ಪಡೆದು ಮರುಪಾವತಿಸಿಲ್ಲ. ಈ ಮೊತ್ತವೇ ಸುಮಾರು 2 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚಾಗಿದೆ.
ಆರ್‌ಬಿಐ ಮಾರ್ಗಸೂಚಿ ಮತ್ತು ನೀತಿಯ ಪ್ರಕಾರ ಬ್ಯಾಂಕುಗಳು ಈ ಮೊತ್ತವನ್ನು ಎನ್‌ಪಿಎ ವರ್ಗಕ್ಕೆ ಸೇರಿಸಿವೆ. ಬ್ಯಾಂಕುಗಳು ತಮ್ಮ ಬ್ಯಾಲೆನ್ಸ್ ಶೀಟ್ ನಿಂದ ಮರುಪಾವತಿಯಾಗದ ಸಾಲವನ್ನು ತೆಗೆದುಹಾಕುವುದನ್ನು ರೈಟ್ ಆಫ್ ಎಂದು ಕರೆಯಲಾಗುತ್ತದೆ. ಸಾಲ ರೈಟ್ ಆಫ್ ಮಾಡಿದ ನಂತರವೂ ಸಾಲ ಮರುಪಾವತಿ ಪ್ರಕ್ರಿಯೆ ಮುಂದುವರೆಯಲಿದೆ ಎನ್ನಲಾಗಿದೆ.