ಕೊರೊನಾ ಮಧ್ಯೆಯೇ ದೇಶದಲ್ಲಿ ಸಿನಿಮಾ ಥಿಯೇಟರ್ ಗಳು ತೆರೆಯಲು ಶುರುವಾಗಿವೆ. ಶೇಕಡಾ 100ರಷ್ಟು ಹಾಜರಾತಿಗೆ ಅವಕಾಶ ನೀಡಲಾಗಿದೆ. ಹೊಸ ಹೊಸ ಚಿತ್ರಗಳು ತೆರೆಗೆ ಬರ್ತಿದ್ದು, ಭಯದ ಮಧ್ಯೆಯೇ ಜನರು ಥಿಯೇಟರ್ ಗಳಿಗೆ ಬರ್ತಿದ್ದಾರೆ. ಆದ್ರೆ ಕೊರೊನಾ ಮೊದಲಿದ್ದ ಜನಸಂದಣಿ ಈಗ ಕಾಣ್ತಿಲ್ಲ. ಕೊರೊನಾ ನಿಧಾನವಾಗಿ ಹೆಚ್ಚಾಗ್ತಿದ್ದು, ಮೂರನೇ ಅಲೆಯ ಭಯದಲ್ಲಿ ಜನರು, ಥಿಯೇಟರ್ ಗಳಿಗೆ ಬಂದು ಸಿನಿಮಾ ನೋಡಲು ಹಿಂದೇಟು ಹಾಕ್ತಿದ್ದಾರೆ. ಜನರನ್ನು ಥಿಯೇಟರ್ ಗೆ ಸೆಳೆಯಲು ಸಿನಿಮಾ ಹಾಲ್‌ಗಳು, ಬ್ಯಾಂಕ್‌ಗಳು, ಬುಕ್ಕಿಂಗ್ ಆ್ಯಪ್‌ಗಳು ಸಾಕಷ್ಟು ಆಫರ್ ನೀಡ್ತಿವೆ.
ದೇಶದ 7ನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಇಂಡಿಯನ್ ಬ್ಯಾಂಕ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ. ಚಲನಚಿತ್ರ ಟಿಕೆಟ್‌ಗಳ ಖರೀದಿಯ ಮೇಲೆ ಬ್ಯಾಂಕ್‌ನಿಂದ ಶೇಕಡಾ 50 ರಷ್ಟು ಅದ್ಭುತ ಕೊಡುಗೆ ಸಿಗ್ತಿದೆ. ಇಂಡಿಯನ್ ಬ್ಯಾಂಕ್ ಗ್ರಾಹಕರು, ಕ್ರೆಡಿಟ್ ಕಾರ್ಡ್ ಬಳಸಿ ಬುಕ್ ಮೈ ಶೋ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿದ್ರೆ ಶೇಕಡಾ 50 ರಷ್ಟು ಬಂಪರ್ ರಿಯಾಯಿತಿ ಸಿಗುತ್ತದೆ, ಇದಕ್ಕೆ ಬ್ಯಾಂಕ್ ಕೆಲ ನಿಯಮಗಳನ್ನು ವಿಧಿಸಿದೆ.
ಗ್ರಾಹಕರು, ಬುಕ್ ಮೈ ಶೋಗೆ ಹೋಗಿ ಸಿನಿಮಾ ಟಿಕೆಟ್ ಬುಕ್ ಮಾಡಬೇಕು. ಆಫರ್ ಅಡಿಯಲ್ಲಿ, ಪ್ರತಿ ತಿಂಗಳಿಗೊಮ್ಮೆ ಮಾತ್ರ ಒಂದು ಕಾರ್ಡ್ ಪಡೆಯಬಹುದು. ಟಿಕೆಟ್ ಬುಕಿಂಗ್ ಮೇಲೆ ಶೇಕಡಾ 50 ರಷ್ಟು ತ್ವರಿತ ರಿಯಾಯಿತಿ ಸಿಗಲಿದೆ. ಒಂದು ಬಾರಿಗೆ ಗರಿಷ್ಠ 250 ರೂಪಾಯಿ ರಿಯಾಯಿತಿ ಸಿಗಲಿದೆ. ಈ ಕೊಡುಗೆ ಡಿಸೆಂಬರ್ 31ರವರೆಗೆ ಗ್ರಾಹಕರಿಗೆ ಲಭ್ಯವಿದೆ.