ನೆರೆ ರಾಷ್ಟ್ರ ಚೀನಾ ಕ್ಯಾತೆ ತೆಗೆಯೋದ್ರಲ್ಲಿ ಫುಲ್ ಎಕ್ಸಪರ್ಟ್. ಇದೇ ಚೀನಾ ಹದ್ದುಬಸ್ತಿನಲ್ಲಿ ಇರುವಂತೆ ಮಾಡಲು ಇಂಡಿಯನ್ ಆರ್ಮಿ ಈಗ ಹೊಸ ಪ್ಲಾನ್ ಒಂದನ್ನ ರೆಡಿ ಮಾಡಿದೆ. ಚೀನಾ ಗಡಿಯಲ್ಲಿರೋ ಭಾರತೀಯ ಸೇನೆ ಇನ್ನಷ್ಟು ಸ್ಟ್ರಾಂಗ್ ಆಗಿರಲು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿ ಪಡಿಸಿದ 12 ಸ್ವಾತಿ-ಶಸ್ತ್ರಶೋಧಕ ರಾಡಾರ್‌ಗಳನ್ನ ಖರೀದಿಸುವ ಬಗ್ಗೆ ಚಿಂತನೆ ನಡೆಸಿದೆ.
ಭಾರತೀಯ ಸೇನೆ ಈಗಾಗಲೇ ಸುಮಾರು ಒಂದು ಸಾವಿರ ಕೋಟಿ ರೂಪಾಯಿಗಳ ಸ್ವಾತಿ WLRಗಾಗಿ ಈ ಪ್ರಸ್ತಾವನೆಯನ್ನ ಸಿದ್ಧಪಡಿಸಿದೆ. ಮತ್ತು ಅದನ್ನು ಉನ್ನತ ಮಟ್ಟದ ರಕ್ಷಣಾ ಸಚಿವಾಲಯದ ಮುಂದೆ ಪರಿಗಣನೆಗೂ ಇಡಲಾಗಿದೆ. ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಮತ್ತು ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ತಯಾರಿಸಿದ ವೆಪನ್ ಲೊಕೇಟಿಂಗ್ ರಾಡಾರ್ ಉತ್ತಮ ಗುಣಮಟ್ಟ ಹೊಂದಿದ್ದು, ಶತ್ರುಗಳು ಅಡಗಿಸಿಟ್ಟ ಶಸ್ತ್ರಾಸ್ತ್ರಗಳ ಜಾಡನ್ನ ಹುಡುಕಲು ಸಹಾಯವಾಗುತ್ತೆ. ಈ ವೆಪನ್ ನ್ನು ಅರ್ಮೇನಿಯಾಗೂ ಕಳುಹಿಸಲಾಗಿದೆ. ಈಗಾಗಲೇ ಜಮ್ಮುಕಾಶ್ಮೀರ ಗಡಿ ನಿಯಂತ್ರಣ ರೇಖೆಯಲ್ಲಿಯೂ ಭಾರತೀಯ ಸೇನೆ ಕಾರ್ಯಾಚರಣೆಗೆ ಈ ವೆಪನ್‌ಗಳನ್ನ ಬಳಸುತ್ತಿವೆ.
ತ್ಯಾವರೆಕೊಪ್ಪ ಲಯನ್ ಸಫಾರಿಯ ಹುಲಿ ‘ರಾಮ’ ಇನ್ನಿಲ್ಲ
ಸುಮಾರು 50 ಕಿಲೋಮೀಟರ್ ವ್ಯಾಪ್ತಿಯ ಒಳಗೆ ಬಾಂಬ್, ಮಿಸೈಲ್, ಹಾಗೂ ಇನ್ನಿತರೇ ವಿಧ್ವಂಸಕ ವಸ್ತುಗಳನ್ನ ರಾಡಾರ್ ಮೂಲಕವೇ ಕಂಡು ಹಿಡಿಯುವ ಸಾಮರ್ಥ್ಯ ಈ ವೆಪನ್‌ಗೆ ಇದೆ. ಸ್ವದೇಶದಲ್ಲಿ ಸಿದ್ಧವಾಗುತ್ತಿರುವ ಯುದ್ಧಾಸ್ತ್ರಗಳ ಬಗ್ಗೆ ಭಾರತೀಯ ಸೇನಾ ಮುಖ್ಯಸ್ಥರಾಗಿರೋ ಜನರಲ್ ಮನೋಜ್ ಪಾಂಡೆಯವರಿಗೆ ಹೆಮ್ಮೆ ಇದೆ.
ಇದೇ ಕಾರಣಕ್ಕೆ ಈಗ ಭಾರತದಲ್ಲಿಯೇ ಸಿದ್ಧವಾಗಿರೋ ಸ್ವಾತಿ-ಶಸ್ತ್ರಶೋಧಕ ರಾಡಾರ್ ಖರೀದಿಸುವುದರ ಕುರಿತು ಅವರು ಆಸಕ್ತಿ ತೋರಿಸಿದ್ದಾರೆ.. ಇಂತಹ ಯುದ್ಧಾಸ್ತ್ರಗಳು ಚೀನಾ ಗಡಿಯಲ್ಲಿ ಮಾತ್ರ ಅಲ್ಲ ಪಾಕಿಸ್ತಾನದ ಗಡಿಯಲ್ಲೂ ಬಳಸುವ ಅಗತ್ಯ ಇದೆ. ಇಂತಹ ಯುದ್ಧಾಸ್ತ್ರಗಳೇ ಭಾರತೀಯ ಸೇನೆಯನ್ನ ಇನ್ನಷ್ಟು ಬಲ ಪಡಿಸುವುದು. ಅಷ್ಟೇ ಅಲ್ಲ ಶತ್ರುಗಳು ಬಾಲುಮುದುರಿಕೊಂಡು ಇರುವಂತೆ ಮಾಡುವುದು.