ಭಾರತೀಯ ಸೇನೆಯು ಸುಮಾರು 1,850 ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಎಸ್ ಯು ವಿ ಗಳಿಗೆ ಆರ್ಡರ್ ಮಾಡಿದೆ. ಈ ಬಗ್ಗೆ ಮಹೀಂದ್ರಾ ಅಂಡ್ ಮಹೀಂದ್ರಾ ಅಧಿಕೃತವಾಗಿ ಘೋಷಿಸಿದೆ.
ಇದಕ್ಕೂ ಮುನ್ನ ಭಾರತೀಯ ಸೇನೆಯು ಕಳೆದ ಜನವರಿಯಲ್ಲಿ 1,470 ಸ್ಕಾರ್ಪಿಯೊ ಕ್ಲಾಸಿಕ್ ಎಸ್ ಯು ವಿ ಗಳನ್ನು ಆರ್ಡರ್ ಮಾಡಿತ್ತು. ಭಾರತೀಯ ಸೇನೆಯ 12 ಘಟಕಗಳ ಬಳಕೆಗಾಗಿ ಈ ಎಸ್ ಯು ವಿ ಗಳನ್ನು ಖರೀದಿಸಲಾಗುತ್ತಿದೆ. ಸ್ಕಾರ್ಪಿಯೋ ಕ್ಲಾಸಿಕ್ ಸ್ಕಾರ್ಪಿಯೋದ ನವೀಕರಿಸಿದ ಆವೃತ್ತಿಯಾಗಿದೆ.
ಭಾರತೀಯ ಸೇನೆಯು ಟಾಟಾ ಸಫಾರಿ, ಟಾಟಾ ಕ್ಸೆನಾನ್, ಫೋರ್ಸ್ ಗೂರ್ಖಾ, ಮಾರುತಿ ಸುಜುಕಿ ಜಿಪ್ಸಿಯಂತಹ ವಾಹನಗಳನ್ನು ಬಳಸುತ್ತದೆ ಎಂಬುದು ಗಮನಾರ್ಹ. ಕಳೆದ ಜೂನ್‌ನಲ್ಲಿ ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ (MDS) ಭಾರತೀಯ ರಕ್ಷಣಾ ಪಡೆಗಳಿಗಾಗಿ ವಿಶೇಷವಾಗಿ ಅಭಿವೃದ್ಧಿಪಡಿಸಿದ ಆರ್ಮರ್ಡ್ ಲೈಟ್ ಸ್ಪೆಷಲಿಸ್ಟ್ ವೆಹಿಕಲ್ (ALSV) “ಆರ್ಮಡೋ” ಅನ್ನು ವಿತರಿಸಲು ಪ್ರಾರಂಭಿಸಿತು.
ಮಿಲಿಟರಿ ಬಳಕೆಗಾಗಿ ನೀಡಲಾಗುವ ಸ್ಕಾರ್ಪಿಯೋ ಕ್ಲಾಸಿಕ್ ವಾಹನಗಳು 4×4 ಪವರ್‌ಟ್ರೇನ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಸಾಧ್ಯತೆಯಿದೆ. ಇದನ್ನು ಪ್ರಸ್ತುತ ಸಾಮಾನ್ಯ ಬಳಕೆಗೆ ಲಭ್ಯವಿರುವ ಆವೃತ್ತಿಗಿಂತ ವಿಭಿನ್ನ ಆವೃತ್ತಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಏಕೆಂದರೆ ಪ್ರಸ್ತುತ ಬಳಕೆಯಲ್ಲಿರುವ ಸ್ಕಾರ್ಪಿಯೋ ಕ್ಲಾಸಿಕ್ 4×4 ಪವರ್‌ಟ್ರೇನ್ ಹೊಂದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಎಂಜಿನ್‌ನ ತೂಕ ಮತ್ತು ಸಸ್ಪೆನ್ಷನ್ ಕೂಡ ವಿಭಿನ್ನವಾಗಿದೆ ಎಂದು ತೋರುತ್ತದೆ.