ನವದೆಹಲಿ: ದಶಕಗಳ ಸೇವೆಯ ಬಳಿಕ ಸೇನೆಗೆ ಮಿಗ್ 21 ಯುದ್ಧ ವಿಮಾನಗಳು ನಿವೃತ್ತಿ ಹೊಂದಲಿವೆ. 1970ರ ದಶಕದಲ್ಲಿ ಎದುರಾಳಿಗಳ ಎದೆ ನಡುಗಿಸಿದ್ದ ಭಾರತೀಯ ವಾಯುಪಡೆಯ ಮಿಗ್ 21 ಬೈಸನ್ ಯುದ್ಧ ವಿಮಾನಗಳನ್ನು ಮಂಗಳವಾರ ಅಧಿಕೃತವಾಗಿ ಸೇವೆಯಿಂದ ಹಿಂಪಡೆಯಲಾಗಿದೆ.
ಹೆಚ್.ಎ.ಎಲ್. ನಿರ್ಮಿಸಿರುವ ದೇಶಿಯ ಎಲ್.ಸಿ.ಎ. ತೇಜಸ್ ಮಾರ್ಕ್ 1 ಯುದ್ಧ ವಿಮಾನಗಳು ಮಿಗ್ ಸ್ಥಾನ ತುಂಬಲಿವೆ.
1960ರಲ್ಲಿ ಭಾರತೀಯ ವಾಯುಪಡೆಗೆ ಮಿಗ್ 21 ವಿಮಾನಗಳು ಸೇರ್ಪಡೆಯಾಗಿದ್ದವು. 1971ರಲ್ಲಿ ನಡೆದ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದ ಹಲವು ನಗರಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಹಿಂದಿನ ಸೋವಿಯತ್ ಒಕ್ಕೂಟದ ಮಿಖೋಯೆನ್ ಗುರ್ವಿಚ್ ಕಂಪನಿ 1959ರಲ್ಲಿ ಮೊದಲ ಬಾರಿ ಮಿಗ್ 21 ಬೈಸನ್ ವಿಮಾನಗಳನ್ನು ತಯಾರಿಸಿ ಖ್ಯಾತಿ ಪಡೆದಿತ್ತು. ಇಂತಹ 11,496 ವಿಮಾನಗಳನ್ನು ತಯಾರಿಸಿದ್ದು, ಭಾರತದ ನಾಸಿಕ್ ನಲ್ಲಿ 840 ವಿಮಾನಗಳನ್ನು ತಯಾರಿಸಲಾಗಿತ್ತು. ಪ್ರಸ್ತುತ 50 ವಿಮಾನಗಳು ವಾಯುಪಡೆಯ ಸೇವೆಯಲ್ಲಿವೆ. ಇವುಗಳ ಸ್ಥಾನವನ್ನು ಹೆಚ್.ಎ.ಎಲ್. ನಿರ್ಮಿತ ದೇಶೀಯ ಎಲ್.ಸಿ.ಎ. ತೇಜಸ್ ಮಾರ್ಕ್ 1 ಯುದ್ಧ ವಿಮಾನಗಳು ತುಂಬಲಿವೆ.