alex Certify Shocking News: ಕೊರೊನಾ ಸಾವಿನ ಸಂಖ್ಯೆಯಲ್ಲಿ ಭಾರತಕ್ಕೆ 3 ನೇ ಸ್ಥಾನ – ಐದು ಲಕ್ಷ ದಾಟಿದ ಮೃತರ ಸಂಖ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking News: ಕೊರೊನಾ ಸಾವಿನ ಸಂಖ್ಯೆಯಲ್ಲಿ ಭಾರತಕ್ಕೆ 3 ನೇ ಸ್ಥಾನ – ಐದು ಲಕ್ಷ ದಾಟಿದ ಮೃತರ ಸಂಖ್ಯೆ

ಇಡೀ ವಿಶ್ವದಲ್ಲೆ, ಭಾರತ ಅತಿ ಹೆಚ್ಚು ಕೊರೋನಾ ಸಾವುಗಳನ್ನ ದಾಖಲಿಸಿದ ಮೂರನೇ ರಾಷ್ಟ್ರವಾಗಿದೆ. ಐದು ಲಕ್ಷಕ್ಕು ಹೆಚ್ಚು ಕೊರೋನಾ ಸಾವುಗಳು ವರದಿಯಾಗಿರೋ ಮೂರನೇ ರಾಷ್ಟ್ರವಾಗಿರುವ ಭಾರತ, ತನ್ನ ಜನಸಂಖ್ಯೆಗೆ ಹೋಲಿಸಿದರೆ ಸಾವಿನ ರೇಟ್ ಕಡಿಮೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಇನ್ನು ಅಮೆರಿಕಾದಲ್ಲಿ 9.1 ಲಕ್ಷಕ್ಕೂ ಹೆಚ್ಚು ಕೋವಿಡ್ ಸಾವುಗಳು ವರದಿಯಾಗಿದ್ದು, ಮೊದಲನೆ ಸ್ಥಾನದಲ್ಲಿದೆ. 6.3ಲಕ್ಷ ಸಾವುಗಳು ವರದಿಯಾಗಿರುವ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. 3.3 ಲಕ್ಷ ಸಾವುಗಳ ಮೂಲಕ ರಷ್ಯಾ ನಾಲ್ಕನೇ ಸ್ಥಾನದಲ್ಲಿದೆ‌.

ಭಾರತದಲ್ಲಿ ಜುಲೈ 1, 2021 ರಂದು 4 ಲಕ್ಷವನ್ನು ದಾಟಿದ 217 ದಿನಗಳ ನಂತರ ಭಾರತದ ಸಾವಿನ ಸಂಖ್ಯೆ 5 ಲಕ್ಷದ ಗಡಿ ದಾಟಿದೆ. ಇದು 1 ಲಕ್ಷದ ಸಾವುಗಳ ಹೆಚ್ಚಳಕ್ಕೆ ತೆಗೆದುಕೊಂಡ ದೀರ್ಘಾವಧಿಯಾಗಿದೆ. ಕೊರೋನಾ ಉತ್ತುಂಗಕ್ಕೇರತ್ತೆ ಎನ್ನುವ ತಿಂಗಳುಗಳಲ್ಲು ಒಟ್ಟಾರೆ ಸಾವಿನ ಸಂಖ್ಯೆ ಇಳಿಕೆಯಾಗಿರುವುದನ್ನ ಈ ಡೇಟಾದಲ್ಲಿ ನೋಡಬಹುದು.‌ ಆದರೆ ಎರಡನೇ ಅಲೆಯ ಸಂದರ್ಭದಲ್ಲಿ ಲಸಿಕಾಕರಣ ಸ್ಥಿರವಾಯಿತು. ಇದರಿಂದ ಜೀವಗಳನ್ನು ರಕ್ಷಿಸಲು ಸಹಾಯಕವಾಯಿತು.

ಇತ್ತ, ದಿನನಿತ್ಯದ ಸಾವುಗಳು ಡಿಸೆಂಬರ್ ಅಂತ್ಯದವರೆಗೆ ಕುಸಿಯುತ್ತಲೇ ಇದ್ದವು. ಈಗ ಒಮಿಕ್ರಾನ್ ಚಾಲಿತ ಮೂರನೇ ಅಲೆಗೆ ಸಂಬಂಧಿಸಿದ ಮರಣಗಳು ಹೆಚ್ಚುತ್ತಿವೆ. ಜನವರಿ 3, 2022 ರಂದು 70 ಇದ್ದ ದೈನಂದಿನ ಸಾವು ಏಳು ದಿನಗಳಲ್ಲೆ 600ರ ಗಡಿ ದಾಟಿದೆ. ಎರಡನೇ ಅಲೆಯ ಸಮಯದಲ್ಲಿ 4,000 ಮತ್ತು ಮೊದಲನೆಯದರಲ್ಲಿ 1,176 ಕ್ಕಿಂತ ಹೆಚ್ಚು ದೈನಂದಿನ ಸಾವುಗಳಿಗೆ ಹೋಲಿಸಿದರೆ, ಈ ಸಂದರ್ಭದಲ್ಲಿನ ಸರಾಸರಿ ಸಾವುಗಳ ಸಂಖ್ಯೆ ಇಳಿಕೆಯಾಗಿರುವುದು ಗಮನಾರ್ಹ. ಸಾವಿನ ಪ್ರಮಾಣ ನೋಡುವುದಾದ್ರೆ, ಮೂರನೇ ಅಲೆಯಲ್ಲಿ 0.16%, ಎರಡನೇ ಅಲೆಯಲ್ಲಿ 1.36% ಮತ್ತು ಮೊದಲನೆಯದರಲ್ಲಿ 1.42% ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...