ಕೊರೊನಾ ವೈರಸ್ ವಕ್ಕರಿಸಿಕೊಂಡಿದ್ದೇ ವಕ್ಕರಿಸಿಕೊಂಡಿದ್ದು, ಕೋಟ್ಯಾಂತರ ಜನರು ಈ ವೈರಸ್ಗೆ ಬಲಿಯಾಗಿದ್ದರು. ಆಗ ಈ ವೈರಸ್ಗೆ ಜನ ಹಾಕದಿರುವ ಶಾಪ ಒಂದೆರಡಲ್ಲ. ಆದರೆ ಇದೇ ಕೊರೊನಾದಿಂದಾಗಿ ಕೆಲ ಒಳ್ಳೆಯ ಬದಲಾವಣೆಗಳು ಕೂಡಾ ಆಗಿವೆ.
ಅದರಲ್ಲೂ ವಿಶೇಷವಾಗಿ ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗಿಗಳಿಂದ ಮನೆಯಿಂದಲೇ ಕೆಲಸ ಮಾಡುವ ಹೊಸ ದಾರಿಯನ್ನ ಕಂಡುಕೊಂಡಿದೆ. ಹೀಗೆ ಮನೆಯಿಂದಲೇ ಕೆಲಸ ಮಾಡುವ ವಿಧಾನದಿಂದಾಗಿ ಉದ್ಯೋಗಿಗಳು ಇನ್ನಷ್ಟು ಕೆಲಸ ಮಾಡಲು ಸಮರ್ಥರಾಗಿರುತ್ತಾರೆ ಅನ್ನೊದು ಕಂಪನಿಗೂ ಕೂಡಾ ಅರಿವಾದಂತಿದೆ. ಇದರಿಂದ ಕಂಪನಿಗೂ ಕೂಡಾ ಖರ್ಚು ಕಡಿಮೆಯಾಗಿದೆ.
ಈಗ ಇದೇ ರೀತಿ ಮುಂದಿನ ದಿನಗಳಲ್ಲಿಯೂ ಮನೆಯಿಂದಲೂ ಮನೆಯಿಂದಲೇ ಉದ್ಯೋಗಿಗಳಿಂದ ಕೆಲಸ ಮಾಡಿಸಿಕೊಳ್ಳುವ ಬಗ್ಗೆ ಚಿಂತನೆ ಕಂಪನಿ ಮಾಡುತ್ತಿದೆ. ಇದೇ ದಿಕ್ಕಿನಲ್ಲಿ ಒಂದು ದೊಡ್ಡ MNC ಕಂಪನಿ ಭಾರತದ 9000 ಉದ್ಯೋಗಿಗಳಿಗೆ ಉದ್ಯೋಗ ನೀಡಲು ನಿರ್ಧಾರ ಮಾಡಿದೆ. ಅವರು ಎಲ್ಲಿಂದಾದರೂ ಕೆಲಸ ಮಾಡಬಹುದು. ಟಾರ್ಗೆಟ್ ಕಂಪ್ಲಿಟ್ ಮಾಡಿದರೆ ಸಾಕು ಅಂತಾ ಹೇಳ್ತಿದೆ ಕಂಪನಿ.
ಈಗಾಗಲೇ ಉದ್ಯೋಗಿಗಳ ಹುಡುಕಾಟದಲ್ಲಿರುವ ಕಂಪನಿಗಳು ಶ್ರೇಣಿ 2 ಮತ್ತು ಶ್ರೇಣಿ 3 ರೀತಿಯಲ್ಲಿ ಹಂತ-ಹಂತವಾಗಿ ಉದ್ಯೋಗಿಗಳ ಇಂಟರ್ವ್ಯೂ ನಡೆಸುತ್ತಿದೆ. ಜಾಗತಿಕ ಗ್ರಾಹಕ ಸೇವಾ ಸಾಫ್ಟ್ ವೇರ್ ಮತ್ತು ಸೇವೆಗಳ ಕಂಪನಿ ಇದೇ ಮಂಗಳವಾರ 9000 ಉದ್ಯೋಗಿಗಳ ನೇಮಕವನ್ನು ಪ್ರಕಟಿಸಿದೆ. ಈ ಉದ್ಯೋಗಿಗಳಿಗೆ ಎಲ್ಲಿಂದಾದರೂ ಕೆಲಸ ಮಾಡಬಹುದು ಅನ್ನೋ ಆಯ್ಕೆ ಅವರಿಗೆ ಕೊಟ್ಟಿದೆ. ಈಗಾಗಲೇ ಫೋನ್ ಮತ್ತು ಚಾಟ್ಗಳ ಮೂಲಕ ಉದ್ಯೋಗಿಗಳ ಜೊತೆ ಕಂಪನಿ ಮಾತುಕತೆ ನಡೆಸುತ್ತಿದೆ. ಇದರಿಂದ ಗ್ರಾಹಕರಿಗೂ ಅನಕೂಲವಾಗಲಿದೆ.
ಮಿಂಟ್ ವರದಿಯ ಪ್ರಕಾರ, ಭಾರತ ಮತ್ತು ಅಮೇರಿಕಾ ಎಸ್ವಿಪಿ ಮತ್ತು ಎಚ್ಆರ್ಡಿ ಹೆಡ್ ನೀನಾ ನಾಯರ್ ಅವರು ಭಾರತವು ಉತ್ತಮ ಮತ್ತು ಸಂಘಟಿತ ಪ್ರತಿಭಾಶಾಲಿ ಉದ್ಯೋಗಿಗಳನ್ನ ಹೊಂದಿದೆ. ಇದೇ ರೀತಿಯ ಉದ್ಯೋಗಿಗಳ ಹುಡುಕಾಟದಲ್ಲಿ ಇರುವ ಕಂಪನಿ ಭಾರತದ ಉದ್ಯೋಗಾಂಕ್ಷಿಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿರುವುದು ವಿಶೇಷ.
ಕಂಪನಿ, ಕಳೆದ ವರ್ಷ ಭಾರತದಿಂದಲೇ 5000 ಜನರನ್ನು ನೇಮಿಸಿಕೊಂಡಿದೆ. ವ್ಯಾಪಾರದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಅವಶ್ಯಕತೆಗಳನ್ನು ಪೂರೈಸಲು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳುವ ಬಗ್ಗೆ ಆಲೋಚನೆ ನಡೆಸಲಾಗುತ್ತಿದೆ.
ಗ್ರಾಹಕರಿಗೆ ವೈಯಕ್ತೀಕರಿಸಿದ ಮತ್ತು ತೃಪ್ತಿಕರ ಅನುಭವವನ್ನು ಒದಗಿಸುವ ಗುರಿ ಕಂಪನಿ ಹೊಂದಿದೆ. ಕೃತಕ ಬುದ್ಧಿಮತ್ತೆಯು ಲಂಬ ಪರಿಣತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಾಗ ಮತ್ತು ಅದಕ್ಕೆ ಹೊಸ ಆಯಾಮವನ್ನು ನೀಡಿದಾಗ ಮಾತ್ರ ಸಮರ್ಥವಾಗಿ ಕೆಲಸ ಮಾಡಲು ಸಾಧ್ಯ ಎಂದು ಕಂಪನಿ ಹೇಳಿಕೊಂಡಿದೆ. ಅಲ್ಲದೇ ಈಗಾಗಲೇ ಕಂಪನಿಗಳ AI ತಂತ್ರಜ್ಞಾನವು ವ್ಯಾಪಾರ ಮತ್ತು ಸಾಮಾನ್ಯ ಗ್ರಾಹಕರ ನಡುವಿನ ವಹಿವಾಟುಗಳನ್ನು ಇನ್ನಷ್ಟು ಸುಲಭಗೊಳಿಸುವುದಕ್ಕೆ ಇನ್ನೂ ಹೆಚ್ಚಿನ ಒತ್ತು ನೀಡುತ್ತಿದೆ.