alex Certify ಬೆಚ್ಚಿಬೀಳಿಸುವಂತಿದೆ ಕಳೆದ 5 ವರ್ಷಗಳಲ್ಲಿ ಪತ್ತೆಯಾದ ʼಹೆರಾಯಿನ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಕಳೆದ 5 ವರ್ಷಗಳಲ್ಲಿ ಪತ್ತೆಯಾದ ʼಹೆರಾಯಿನ್ʼ

2017ರಲ್ಲಿ ಭಾರತದಲ್ಲಿ 2,146 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದ ಎನ್ಸಿಬಿ, ಅದೇ 2021 ರಲ್ಲಿ 7,282 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದೆ. ಇದು ಆತಂಕ ಪಡುವಷ್ಟು ಅಂದರೆ ಸರಿಸುಮಾರು 300 ಪ್ರತಿಶತ ಹೆಚ್ಚಳವಾಗಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಪ್ರಧಾನ ನಿರ್ದೇಶಕ ಎಸ್ಎನ್ ಪ್ರಧಾನ್ ಮಂಗಳವಾರ ಹೇಳಿದ್ದಾರೆ.

ಏಪ್ರಿಲ್ 22 ರಂದು ಮುಕ್ತಾಯಗೊಳ್ಳಲಿರುವ ಮೂರು ಹಂತದ ಕಾರ್ಯಕ್ರಮವಾದ ‘ಡಾರ್ಕಥಾನ್ 2022′ ಅನ್ನು ಉದ್ಘಾಟಿಸಿದ ಅವರು ಈ ಮಾಹಿತಿ ನೀಡಿದ್ದಾರೆ. ಡಾರ್ಕಥಾನ್ 2022’, ಡಾರ್ಕ್‌ನೆಟ್ ಮೂಲಕ ಮಾದಕವಸ್ತು ಕಳ್ಳಸಾಗಣೆಯನ್ನು ಎದುರಿಸಲು ಪರಿಹಾರಗಳನ್ನು ಕಂಡುಹಿಡಿಯುವ ಗುರಿ ಹೊಂದಿದೆ.

2021ರ UNODC ವರ್ಲ್ಡ್ ಡ್ರಗ್ ರಿಪೋರ್ಟ್ ಅನ್ನು ಹೈಲೈಟ್ ಮಾಡಿರುವ NCB ಮುಖ್ಯಸ್ಥ ಪ್ರಧಾನ್, ಭಾರತದಲ್ಲಿ ಡ್ರಗ್ ಜಾಲ ಹೆಚ್ಚಳವಾಗುತ್ತಿರುವುದನ್ನ ಒತ್ತಿ ಹೇಳಿದ್ದಾರೆ. ಅಷ್ಟೇ ಅಲ್ಲಾ ಡಾರ್ಕ್‌ನೆಟ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಅಂದರೆ 94% ವಹಿವಾಟು, ಮಾದಕ ವಸ್ತುಗಳಿಗೆ ಸಂಬಂಧಪಟ್ಟಿದೆ. ಸ್ಮಗ್ಲರ್ ಗಳು ಹಾಗೂ ಪೆಡ್ಲರ್ ಗಳು ಮಾದಕ ವಸ್ತು ಕಳ್ಳಸಾಗಣೆಗೆ ಹೊಸ ದಾರಿ ಹಿಡಿದಿದ್ದಾರೆಂದು ಪ್ರಸ್ತಾಪಿಸಿದ್ದಾರೆ.

ನಾನೇನು ಭಯೋತ್ಪಾದಕನೇ…..? ಅವರೇಕೆ ನನ್ನನ್ನು ಕಂಡರೆ ಹೆದರುತ್ತಾರೆ…..? ಬಿಜೆಪಿ ವಿರುದ್ಧ ಕಿಡಿಕಾರಿದ ಚರಂಜಿತ್ ಸಿಂಗ್ ಚನ್ನಿ…..!

ಕಡಲ ಮಾರ್ಗ ಮತ್ತು ಡಾರ್ಕ್‌ನೆಟ್ ಮೂಲಕ ಮಾದಕವಸ್ತು ಸ್ಮಗಲ್ ಮಾಡುವುದರಲ್ಲಿ ಏರಿಕೆ ಕಂಡುಬಂದಿದೆ ಎಂದು ಪ್ರಧಾನ್, ಮಾಹಿತಿ ನೀಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ, ಭಾರತವು ಹೆರಾಯಿನ್ ವಶಪಡಿಸಿಕೊಳ್ಳುವಲ್ಲಿ ಘಾತೀಯ ಹೆಚ್ಚಳವನ್ನು ಕಂಡಿದೆ. ಅಂತೆಯೇ, ಅಫೀಮು ವಶಪಡಿಸಿಕೊಳ್ಳುವಿಕೆಯಲ್ಲಿ ಶೇಕಡಾ 172 ರಷ್ಟು ಹೆಚ್ಚಳವಾಗಿದೆ. ಗಾಂಜಾ ವಶಪಡಿಸಿಕೊಳ್ಳುವಿಕೆಯಲ್ಲಿ ಶೇಕಡಾ 191 ರಷ್ಟು ಹೆಚ್ಚಳವಾಗಿದೆ, 2017 ರಲ್ಲಿ 3,52,539 ಕೆಜಿಯಿಂದ 2021 ರಲ್ಲಿ 6,75,6,631 ಕೆಜಿ ಗಾಂಜಾ ವಶಪಡಿಸಿಕೊಳ್ಳಾಗಿದೆ.‌

ಡಾರ್ಕ್ನೆಟ್ ಮೂಲಕ ಮಾದಕವಸ್ತು ಕಳ್ಳಸಾಗಣೆಯನ್ನು ಎದುರಿಸಲು ಮತ್ತು ತಡೆಯಲು ಪರಿಹಾರಗಳನ್ನು ಕಂಡುಹಿಡಿಯಲು,‌ “ಡಾರ್ಕಥಾನ್ 2022” ಅನ್ನು NCB ಮೂರು ಹಂತಗಳಲ್ಲಿ ಆಯೋಜಿಸುತ್ತಿದೆ. ಈವೆಂಟ್ ಪ್ರಾರಂಭವಾಗಿದ್ದು, ಏಪ್ರಿಲ್ 22 ರಂದು ಮುಕ್ತಾಯಗೊಳ್ಳಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎನ್‌ಸಿಬಿಯ ವಿಮರ್ಶೆಯೊಂದರಲ್ಲಿ ಈ ಸವಾಲನ್ನು ಗುರುತಿಸಿದ್ದರು. ಈ ವೇಳೆ ಪ್ರಧಾನಿ ಕಚೇರಿಯು ದೇಶದ ಯುವಕರು, ತಾಂತ್ರಿಕ ವಿದ್ಯಾರ್ಥಿಗಳನ್ನು ಒಳಗೊಂಡ ಹ್ಯಾಕಥಾನ್ ಒಂದನ್ನು ಆಯೋಜಿಸಿ.‌ ಈ ಮೂಲಕ ಡಾರ್ಕ್‌ನೆಟ್ ಮಾರುಕಟ್ಟೆಯ ಮೂಲಕ ಮಾದಕವಸ್ತು ಕಳ್ಳಸಾಗಣೆಯ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ ಎಂದು ನಿರ್ದೇಶಿಸಿದ ಕಾರಣ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು NCB ಪ್ರಧಾನ‌ ನಿರ್ದೇಶಕರು‌ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...