
ದುಬೈ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ ಟ್ರೋಫಿಯ ಮೊದಲ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಭರ್ಜರಿ ಜಯಗಳಿಸಿ ಫೈನಲ್ ಪ್ರವೇಶಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 49.3 ಓವರ್ ಗಳಲ್ಲಿ 264 ರನ್ ಗಳಿಗೆ ಆಲೌಟ್ ಆಯಿತು. ಟ್ರಾವಿಸ್ ಹೆಡ್ 39, ಸ್ಟೀವ್ ಸ್ಮಿತ್ 73, ಮಾರ್ನಸ್ ಲಬುಶಾಂಗೇ 29, ಅಲೆಕ್ಸ್ ಕ್ಯಾರಿ 61 ರನ್ ಗಳಿಸಿದರು. ಭಾರತದ ಪರ ಮಹಮದ್ ಶಮಿ 3, ವರುಣ್ ಚಕ್ರವರ್ತಿ 2, ರವೀಂದ್ರ ಜಡೇಜಾ 2 ವಿಕೆಟ್ ಪಡೆದರು.
265 ರನ್ ಗೆಲುವಿನ ಗುರಿ ಬೆನ್ನತ್ತಿದ ಭಾರತ 4 ವಿಕಟ್ ಗಳಿಂದ ಗೆಲುವು ಕಂಡಿದೆ. ಭಾರತ 48.1 ಓವರ್ ಗಳಲ್ಲಿ 6 ವಿಕೆಟ್ ಗೆ 267 ರನ್ ಗಳಿಸಿತು.
ಭಾರತದ ಪರ ರೋಹಿತ್ ಶರ್ಮಾ 28, ವಿರಾಟ್ ಕೊಹ್ಲಿ 84, ಶ್ರೇಯಸ್ ಅಯ್ಯರ್ 45, ಅಕ್ಷರ್ ಪಟೇಲ್ 27, ಕೆ.ಎಲ್. ರಾಹುಲ್ ಅಜೇಯ 42, ಹಾರ್ದಿಕ್ ಪಾಂಡ್ಯ 28, ರವೀಂದ್ರ ಜಡೇಜ ಅಜೇಯ 2 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಆಡಮ್ ಜಂಪ 2, ನೇಥನ್ ಎಲ್ಲಿಸ್ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ 264/10(49.3)
ಭಾರತ 267/6(48.1)
CT 2025. India Won by 4 Wicket(s) (Qualified) https://t.co/HYAJl7biEo #INDvAUS #ChampionsTrophy #SemiFinals
— BCCI (@BCCI) March 4, 2025