ಭಾರತವು ಶೀಘ್ರದಲ್ಲಿಯೇ ವರ್ಷಕ್ಕೆ 1 ಲಕ್ಷ ಪೇಟೆಂಟ್ಗಳನ್ನು ವಿತರಿಸೋ ಸಾಮರ್ಥ್ಯವನ್ನ ಹೊಂದಲಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹೆಗಾರ ಸದಸ್ಯ ಸಂಜೀವ್ ಸನ್ಯಾಲ್ ಭವಿಷ್ಯ ನುಡಿದಿದ್ದಾರೆ. 2016ರವರೆಗೆ ಭಾರತವು ವರ್ಷಕ್ಕೆ 9 ಸಾವಿರ ಪೇಟೆಂಟ್ಗಳನ್ನು ಮಾತ್ರ ನೀಡುತ್ತಿತ್ತು. ಆದರೆ ಇಂದು ಮುಂದಿನ 18 ತಿಂಗಳುಗಳಲ್ಲಿ ಬದಲಾಗಲಿದೆ ಎನ್ನಲಾಗಿದೆ.
ಭಾರತವು ಪ್ರಸ್ತುತ 35 ಸಾವಿರ ಪೇಟೆಂಟ್ಗಳನ್ನು ನೀಡುತ್ತಿದೆ. ಅಮೆರಿಕ ವರ್ಷಕ್ಕೆ 3.5 ಲಕ್ಷ ಪೇಟೆಂಟ್ಗಳನ್ನು ಮಾಡುತ್ತದೆ. ಚೀನಾ ವರ್ಷಕ್ಕೆ ಅರ್ಧ ಮಿಲಿಯನ್ ಪೇಟೆಂಟ್ಗಳನ್ನು ಮಾಡುತ್ತದೆ. ಆದರೆ ಅನೇಕ ಚೀನಿ ಪೇಟೆಂಟ್ಗಳು ಕಳಪೆ ಗುಣಮಟ್ಟವನ್ನು ಹೊಂದಿವೆ ಎನ್ನಲಾಗಿದೆ.
ಆದರೂ 1 ಲಕ್ಷ ಗುಣಮಟ್ಟದ ಪೇಟೆಂಟ್ಗಳನ್ನು ಒದಗಿಸುತ್ತಿದ್ದಾರೆ. ಹೀಗಿರುವಾಗ ನಾವು ಕೂಡ ವರ್ಷಕ್ಕೆ 1 ಲಕ್ಷ ಪೇಟೆಂಟ್ಗಳನ್ನ ಮಾಡಲೇಬೇಕು. ಆದರೆ ಇವುಗಳನ್ನು ಮಾಡಲು ನಮ್ಮ ಪೇಟೆಂಟ್ ಕಚೇರಿಯ ಸಾಮರ್ಥ್ಯದ ಅಗತ್ಯ ಕೂಡ ನಮಗಿದೆ ಎಂದು ಸಂಜೀವ್ ಸನ್ಯಾಲ್ ಹೇಳಿದ್ದಾರೆ.
ಜನರು ರಚನಾತ್ಮಕ ಸುಧಾರಣೆಗಳ ಬಗ್ಗೆ ಮಾತನಾಡಲು ಬಯಸುತ್ತಾರೆ. ಇಲ್ಲಿ ಚೌಕಟ್ಟುಗಳು ಸಂಪೂರ್ಣ ಬದಲಾಗಿದೆ. ಈ ಗುರಿಯನ್ನು ಸಾಧಿಸಬೇಕು ಎಂದರೆ ನಾವು ಸಾಕಷ್ಟು ಸುಧಾರಣೆಗಳನ್ನು ಮಾಡಿಕೊಳ್ಳಬೇಕು ಎಂದು ಸಂಜೀವ್ ಸನ್ಯಾಲ್ ಅಭಿಪ್ರಾಯಪಟ್ಟಿದ್ದಾರೆ.