
ಇಂದು ನ್ಯೂಯಾರ್ಕ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನ 25ನೇ ಪಂದ್ಯದಲ್ಲಿ ಭಾರತ ಮತ್ತು ಯು ಎಸ್ ಎ ಮುಖಾಮುಖಿಯಾಗಲಿದೆ. ಅಮೆರಿಕ ತಂಡ ತನ್ನ ಹೋಮ್ ಗ್ರೌಂಡ್ ನಲ್ಲಿ ಮಿಂಚುತ್ತಿದ್ದು, ಸೂಪರ್ 8ಗೆ ಬರುವ ಲೆಕ್ಕಾಚಾರದಲ್ಲಿದೆ. ಈ ತಂಡ ಉಳಿದ ಎರಡು ಪಂದ್ಯಗಳಲ್ಲಿ ಸೋಲು ಕಂಡರೆ ಪಾಕಿಸ್ತಾನಕ್ಕೆ ಸೂಪರ್ 8ಗೆ ಬರುವ ಅವಕಾಶವಿರಲಿದೆ. ಹಾಗಾಗಿ ಪಾಕಿಸ್ತಾನ ತಂಡ ಯು ಎಸ್ ಎ ಸೋಲುವುದನ್ನೇ ಕಾಯುತ್ತಿದ್ದಾರೆ.
ಯುಎಸ್ಎ ತಂಡದಲ್ಲಿ ಐದು ಭಾರತೀಯ ಆಟಗಾರರಿದ್ದು, ಯುಎಸ್ಎ ತಂಡದ ಪ್ರಮುಖ ಬೌಲರ್ ಸೌರಭ್ ನೇತ್ರವಾಲ್ಕರ್ ಗೆ ಭಾರತದ ಎಲ್ಲಾ ಆಟಗಾರರ ಪರಿಚಯವಿದೆ. ಅಂಡರ್ 19 ಕ್ರಿಕೆಟ್ ನಲ್ಲಿ ಭಾರತದ ಪರ ಸ್ಪರ್ಧಿಸಿರುವ ಇವರು ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ಮುಂಬೈ ತಂಡದಲ್ಲು ಮಿಂಚಿದ್ದಾರೆ. ಬೌಲಿಂಗ್ ಗೆ ಹೆಸರುವಾಸಿಯಾಗಿರುವ ಈ ಕ್ರೀಡಾಂಗಣದಲ್ಲಿ ಇಂದು ಯಾವ ತಂಡ ಸೂಪರ್ 8 ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ ಕಾದು ನೋಡಬೇಕಾಗಿದೆ.