ಭಾರತ-ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಗೆಲ್ಲುವ ಸುವರ್ಣಾವಕಾಶವನ್ನು ಟೀಂ ಇಂಡಿಯಾ ಕಳೆದುಕೊಂಡಿದೆ. ಕಾನ್ಪುರದ ಗ್ರೀನ್ ಪಾರ್ಕ್ ನಲ್ಲಿ ನಡೆದ ಪಂದ್ಯದಲ್ಲಿ ಕಿವೀಸ್ ತಂಡದ ಕೊನೆಯ ಬ್ಯಾಟ್ಸ್ ಮನ್ಸ್, ರಚಿನ್ ರವೀಂದ್ರ ಮತ್ತು ಎಜಾಜ್ ಪಟೇಲ್ ಅದ್ಭುತ ಆಟ, ಭಾರತದ ಸೋಲಿಗೆ ಕಾರಣವಾಯ್ತು.
ನ್ಯೂಜಿಲೆಂಡ್, ಎರಡನೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ರಚಿನ್ ರವೀಂದ್ರ 18 ಮತ್ತು ಎಜಾಜ್ ಪಟೇಲ್ 2 ರನ್ ಗಳಿಸಿ ಔಟಾಗದೆ ಉಳಿದರು. ಇದರಿಂದಾಗಿ ಪಂದ್ಯ ಡ್ರಾ ಆಗಿದೆ. ಟೀಂ ಇಂಡಿಯಾ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನದ ಮಧ್ಯೆಯೂ ತಂಡಕ್ಕೆ ಜಯ ಸಿಗಲಿಲ್ಲ.
ಭಾರತದ ಎರಡನೇ ಇನ್ನಿಂಗ್ಸ್ ನಲ್ಲಿ ಶ್ರೇಯಸ್ ಅಯ್ಯರ್ 65 ರನ್ ಗಳಿಸಿದ್ದರು. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ವೃದ್ಧಿಮಾನ್ ಸಹಾ ಅಜೇಯ 61 ರನ್ ಗಳಿಸಿದ್ದರು. ಆರ್. ಅಶ್ವಿನ್ 32 ರನ್ ಪೇರಿಸಿದ್ದರು. ಅಕ್ಷರ್ ಪಟೇಲ್ ಔಟಾಗದೆ 28 ಮತ್ತು ಚೇತೇಶ್ವರ ಪೂಜಾರ 22 ರನ್ ಗಳಿಸಿ ಟೀಂ ಇಂಡಿಯಾ ಸ್ಕೋರ್ ಬಲಿಷ್ಠಗೊಳಿಸಿದ್ದರು. ಕಿವೀಸ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 296 ರನ್ ಗಳಿಸಿ ಟೀಂ ಇಂಡಿಯಾಕ್ಕೆ 49 ರನ್ ಮುನ್ನಡೆ ತಂದುಕೊಟ್ಟಿತ್ತು.
ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 3ರಿಂದ 7ರವರೆಗೆ ನಡೆಯಲಿದ್ದು, ವಿರಾಟ್ ಕೊಹ್ಲಿ ತಂಡಕ್ಕೆ ಮರಳಲಿದ್ದಾರೆ.