ಇಂಗ್ಲೆಂಡ್ ವಿರುದ್ಧದ ಸರಣಿ ಆರಂಭಗೊಳ್ಳುವ ಮುನ್ನವೇ ತನ್ನ ಇಬ್ಬರು ತಜ್ಞ ವಿಕೆಟ್ ಕೀಪರ್‌ಗಳ ಸೇವೆಯನ್ನು ಕಳೆದುಕೊಂಡಿರುವ ಟೀಂ ಇಂಡಿಯಾಗೆ ತಲೆ ನೋವೊಂದು ಶುರುವಾಗಿದೆ.
ಜುಲೈ 8ರಂದು ಕೋವಿಡ್ ಪಾಸಿಟಿವ್ ಎಂದು ಕಂಡುಬಂದಿರುವ ರಿಶಬ್ ಪಂತ್ ಮುಂದಿನ ವಾರ ಸಮಗ್ರ ಕೌಂಟಿಗಳ ಇಲೆವನ್ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇದೇ ವೇಳೆ ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿ ದಯಾನಂದ್ ಘರಣಿಯೊಂದಿಗೆ ಸಂಪರ್ಕದಲ್ಲಿದ್ದ ಮತ್ತೊಬ್ಬ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಸಹ ಐಸೋಲೇಟ್ ಆಗಬೇಕಿದೆ.
ದೇಶದ್ರೋಹ ವಿರೋಧಿ ಕಾನೂನು ಕುರಿತು ʼಸುಪ್ರೀಂʼನಿಂದ ಪ್ರಬಲ ಸಂದೇಶ ರವಾನೆ
ಈ ಕಾರಣದಿಂದ ಅಭ್ಯಾಸ ಪಂದ್ಯಕ್ಕೆ ವಿಕೆಟ್ ಕೀಪಿಂಗ್ ಹೊಣೆಗಾರಿಕೆಯನ್ನು ಕೆ.ಎಲ್. ರಾಹುಲ್ ನಿರ್ವಹಿಸುವ ಸಾಧ್ಯತೆ ಇದೆ. ಇದೇ ವೇಳೆ, ಕಾಮೆಂಟರಿ ಮಾಡಲು ಬ್ರಿಟನ್‌ನಲ್ಲಿರುವ ಟೀಂ ಇಂಡಿಯಾದ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಟ್ವೀಟ್ ಮಾಡಿದ್ದು, ’ಅಗತ್ಯವಿದ್ದಲ್ಲಿ ಆಡಲು ನಾನು ರೆಡಿ’ ಎಂಬರ್ಥದ ಟ್ವೀಟ್ ಒಂದನ್ನು ಕ್ಯಾಶುವಲ್ ಆಗಿ ಮಾಡಿದ್ದಾರೆ.
ಐಪಿಎಲ್ 2021ರ ಸೀಸನ್‌ನ ಮುಂದಿನ ಪಂದ್ಯಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಕಾರ್ತಿಕ್ ಮುನ್ನಡೆಸಲಿದ್ದಾರೆ. ಸದ್ಯಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಿಂದ ಬ್ರಿಟನ್‌ನಲ್ಲಿರುವ ಕಾರ್ತಿಕ್, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಸಖತ್ ಎಂಗೇಜ್ ಆಗಿದ್ದಾರೆ.