ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯ ಶುರುವಾಗಿದೆ. ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದು, ಆರಂಭದಲ್ಲಿಯೇ ಭಾರತಕ್ಕೆ ಆಘಾತವಾಗಿದೆ. ಭಾರತದ ಮೂವರು ಆಟಗಾರರು ಪೆವಿಲಿಯನ್ ಪರೆಡ್ ನಡೆಸಿದ್ದಾರೆ. ಈ ಮಧ್ಯೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೇಲೆ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ.
ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಆದ್ರೆ ನಾಲ್ಕನೇ ಟೆಸ್ಟ್ ನಲ್ಲಿಯೂ ಆರ್.ಅಶ್ವಿನ್ ಗೆ ಅವಕಾಶ ನೀಡಲಿಲ್ಲ. ನಾಲ್ಕನೇ ಟೆಸ್ಟ್ ನ ಪ್ಲೇಯಿಂಗ್ ಇಲೆವೆನ್ ನಲ್ಲಿ ಅಶ್ವಿನ್ ಜಾಗ ಪಡೆದಿಲ್ಲ. ಇದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಈ ಬಾರಿ ಅಶ್ವಿನ್ ಮೈದಾನಕ್ಕಿಳಿಯಲಿದ್ದಾರೆಂದು ಕ್ರಿಕೆಟ್ ಅಭಿಮಾನಿಗಳು ಭಾವಿಸಿದ್ದರು. ಆದ್ರೆ ಅಶ್ವಿನ್ ಬದಲು ಮತ್ತೆ ರವೀಂದ್ರ ಜಡೇಜಾಗೆ, ಕೊಹ್ಲಿ ಅವಕಾಶ ನೀಡಿದ್ದಾರೆ.
ರವಿಚಂದ್ರನ್ ಅಶ್ವಿನ್ ಪ್ರಸ್ತುತ ವಿಶ್ವದ ಅತ್ಯುತ್ತಮ ಸ್ಪಿನ್ ಬೌಲರ್. ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ ಒಟ್ಟು 413 ವಿಕೆಟ್ ಪಡೆದಿದ್ದಾರೆ.ಟೆಸ್ಟ್ ಕ್ರಿಕೆಟ್ ನಲ್ಲಿ 5 ಶತಕಗಳನ್ನು ಸಿಡಿಸಿದ್ದಾರೆ. ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಉಮೇಶ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಗೆ ಅವಕಾಶ ನೀಡಲಾಗಿದೆ.