alex Certify ಟಿ20 ವಿಶ್ವ ಕಪ್ 2024; ಇಂದು ಭಾರತ ಹಾಗೂ ಕೆನಡಾ ಹಣಾಹಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ20 ವಿಶ್ವ ಕಪ್ 2024; ಇಂದು ಭಾರತ ಹಾಗೂ ಕೆನಡಾ ಹಣಾಹಣಿ

 

 

ಟಿ20 ವಿಶ್ವ ಕಪ್ ನ ಸೂಪರ್ ಪಂದ್ಯಗಳು ಇನ್ನೇನು ಜೂನ್ 19ಕ್ಕೆ ಆರಂಭವಾಗಲಿ ಈಗಾಗಲೇ ಭಾರತ ಸೇರಿದಂತೆ ಆರು ತಂಡಗಳು ಸೂಪರ್ 8 ಗೆ ಲಗ್ಗೆ ಇಟ್ಟಿವೆ. ಇನ್ನು ಉಳಿದ ಎರಡು ಸ್ಥಾನಕ್ಕಾಗಿ ಬಾಂಗ್ಲಾದೇಶ, ನೆದರ್ಲ್ಯಾಂಡ್, ಇಂಗ್ಲೆಂಡ್ ಸೇರಿದಂತೆ ಕಾಟ್ಲ್ಯಾಂಡ್ ತಂಡ ಭರ್ಜರಿ ಹೋರಾಟ ನಡೆಸುತ್ತಿದೆ.

ಇಂದು ಗ್ರೂಪ್ ಎ ನಲ್ಲಿರುವ ಭಾರತ ಮತ್ತು ಕೆನಡಾ ಮುಖಾಮುಖಿಯಾಗಲಿವೆ. ಭಾರತ ತಂಡ ಈಗಾಗಲೇ ಸೂಪರ್ 8 ಗೆ ಕ್ವಾಲಿಫೈ ಆದರೆ ಕೆನಡಾ ತಂಡ ಬಲಿಷ್ಠ ಭಾರತದೊಂದಿಗೆ ಸ್ಪರ್ಧಿಸುವ ಉತ್ಸಾಹದಲ್ಲಿದ್ದಾರೆ. ಎರಡು ತಂಡಗಳಿಗೂ ಇದು ಮುಖ್ಯವಾದ ಪಂದ್ಯವಲ್ಲದೇ ಇದ್ದರೂ ತಮ್ಮ ಪ್ರತಿಷ್ಠೆಗಾಗಿ ಸ್ಪರ್ಧಿಸಲಿವೆ.

ಗ್ರೂಪ್ ಎ ನಲ್ಲಿರುವ ಅಮೆರಿಕ ತಂಡ ತನ್ನ ಮೊದಲ ವಿಶ್ವಕಪ್ನಲ್ಲೇ ಸೂಪರ್ 8 ಅಂತ ತಲುಪಿರುವ ಸಂಭ್ರಮದಲ್ಲಿದ್ದರೆ. ಭಾರತ ತಂಡ 17 ವರ್ಷಗಳ ಬಳಿಕ ಮತ್ತೊಮ್ಮೆ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯುವ ನಿರೀಕ್ಷೆಯಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...