
ಈ ಚಿಯರ್ ಅಪ್ ಮಾಡಿದ ಕ್ಷಣವನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದ್ದು ಈ ವಿಡಿಯೋ ಕೆಲವೇ ನಿಮಿಷಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸಾರಾ ತೆಂಡೂಲ್ಕರ್ ಅವರು ಶುಬ್‌ಮಾನ್ ಗಿಲ್‌ಗೆ ಫುಲ್ ಸಪೋರ್ಟ್ ನೀಡಿರೋದು ಸಾಕಷ್ಟು ಚರ್ಚೆಯಾಗ್ತಿದೆ. ಅವರ ಉತ್ಸಾಹಭರಿತ ಚಿಯರ್ಸ್ ಮತ್ತು ಜನಸಂದಣಿಯ ನಡುವೆ ಅವರು ಕಾಣಿಸಿಕೊಂಡಿರುವುದು ಇಂಟರ್‌ನೆಟ್‌ನಲ್ಲಿ ಸಖತ್ ಟ್ರೆಂಡ್ ಆಗಿದ್ದಲ್ಲದೆ ಎಲ್ಲರ ಕುತೂಹಲಕ್ಕೂ ಕಾರಣವಾಗಿದೆ.
ಆರಂಭದಲ್ಲಿ ತಾಳ್ಮೆಯ ಆಟಕ್ಕೆ ಮುಂದಾದ ಗಿಲ್, ನಂತರ ರೋಹಿತ್ರಂತೆ ಆಕ್ರಮಣಕಾರಿ ಬ್ಯಾಟಿಂಗ್ ಆರಂಭಿಸಿದರು. ಇದೇ ವೇಳೆ ಭಾರತದ ಇನ್ನಿಂಗ್ಸ್ನ 4ನೇ ಓವರ್ 4ನೇ ಎಸೆತವನ್ನು ಎದುರಿಸಿದ ಗಿಲ್, ಆ ಎಸೆತವನ್ನು ಲಾಂಗ್ ಆಫ್ನಲ್ಲಿ ಸೀದಾ ಸಿಕ್ಸರ್ಗಟ್ಟಿದರು. ಗಿಲ್ ಅವರ ಈ ಸಿಕ್ಸರ್ಗೆ ಇಡೀ ಮೈದಾನವೇ ಹುಚ್ಚೆದು ಕುಣಿಯಿತು. ಅದರಲ್ಲೂ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿರುವ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಚಪ್ಪಾಳೆ ತಟ್ಟುತ್ತ ನಗುವಿನೊಂದಿಗೆ ಸಂಭ್ರಮಾಚರಣೆ ಮಾಡಿದರು. ಸಾರಾ ನೀಡಿರುವ ಈ ರಿಯಾಕ್ಷನ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಇನ್ನೊಂದು ವಿಚಾರವಂದ್ರೆ ಸಾರಾ ತೆಂಡೂಲ್ಕರ್ ಅವರ ವಿಡಿಯೋ ಈ ಪರಿ ವೈರಲ್ ಆಗಲು ಕಾರಣವೂ ಇದೆ. ಟೀಂ ಇಂಡಿಯಾ ಯುವ ಕ್ರಿಕೆಟಿಗ ಶುಭ್ಮನ್ ಗಿಲ್ ಹಾಗೂ ಸಾರಾ ತೆಂಡೂಲ್ಕರ್ ಬಹಳ ದಿನಗಳಿಂದ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಈ ಇಬ್ಬರು ಸಹ ಹೋಟೆಲ್ಗಳಲ್ಲಿ ಹಾಗೂ ವಿದೇಶಗಳಲ್ಲಿ ಒಟ್ಟಾಗಿ ಕಾಣಸಿಕೊಂಡಿದ್ದಾರೆ. ಹೀಗಾಗಿ ಈ ಇಬ್ಬರ ನಡುವೆ ಪ್ರೀತಿ ಇದೆ ಎಂಬುದು ಹಲವರ ಮಾತಾಗಿದೆ. ಆದರೆ ಈ ವದಂತಿಯ ಬಗ್ಗೆ ಈ ಇಬ್ಬರು ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.