ಜಿ20 ಮತ್ತು ಯುಎನ್ ಸೆಕ್ಯುರಿಟಿ ಕೌನ್ಸಿಲ್(ಯುಎನ್‌ಎಸ್‌ಸಿ) ಅಧ್ಯಕ್ಷ ಸ್ಥಾನಗಳನ್ನು ಭಾರತ ಗುರುವಾರ ಅಧಿಕೃತವಾಗಿ ವಹಿಸಿಕೊಳ್ಳಲಿದೆ. UNSC ಅಧ್ಯಕ್ಷ ಸ್ಥಾನವು ಒಂದು ತಿಂಗಳು ಇರುತ್ತದೆ, ಆದರೆ G20 ಅಧ್ಯಕ್ಷತೆಯು ಒಂದು ವರ್ಷ ಇರುತ್ತದೆ.
ಅತಿ ದೊಡ್ಡ ಪ್ರಜಾತಂತ್ರ ದೇಶ ಭಾರತ ಜಿ20 ಆತಿಥ್ಯ ವಹಿಸಲಿದ್ದು, ಜಾಗತಿಕ ಬದಲಾವಣೆಗೆ ವೇಗ ನೀಡಲಿದೆ. ಭಾರತದ ಜಿ20 ಅಧ್ಯಕ್ಷತೆಯು ಸಮಗ್ರತೆ ಮಹತ್ವಾಕಾಂಕ್ಷೆಯಿಂದ ಕೂಡಿದ್ದು, ದೃಢ ಸಂಕಲ್ಪ ಹಾಗೂ ಕ್ರಿಯೆ ಆಧಾರಿತವಾಗಿರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಜಿ20 ಸಭೆಗಳನ್ನು ದೇಶದ ವಿಭಿನ್ನ ನಗರಗಳಲ್ಲಿ ಮತ್ತು ರಾಜ್ಯಗಳಲ್ಲಿ ಯೋಜಿಸಲಾಗಿದ್ದು, ಜಗತ್ತಿನ ವಿವಿಧ ಭಾಗಗಳಿಂದ ಆಗಮಿಸಿದ ಅತಿಥಿಗಳಿಗೆ ಭಾರತದ ಅದ್ಭುತ ವೈವಿಧ್ಯತೆ ಸುಂದರ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ವೈಭವದ ರೋಚಕ ಅನುಭವ ನೀಡುತ್ತದೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಘೋಷ ವಾಕ್ಯದಡಿ ಭಾರತ ಜಿ 20 ಅಧ್ಯಕ್ಷ ಸ್ಥಾನ ನಿರ್ವಹಿಸಲು ಕಾರ್ಯ ಯೋಜನೆ ರೂಪಿಸಿದೆ.
ದೆಹಲಿಯ ಹುಮಾಯೂನ್ ಸಮಾಧಿ ಮತ್ತು ಪುರಾನಾ ಕ್ವಿಲಾದಿಂದ ಗುಜರಾತ್‌ನ ಮೊಧೇರಾ ಸೂರ್ಯ ದೇವಾಲಯ, ಮತ್ತು ಒಡಿಶಾದ ಕೋನಾರ್ಕ್ ಸೂರ್ಯ ದೇವಾಲಯದಿಂದ ಬಿಹಾರದ ಶೇರ್ ಶಾ ಸೂರಿಯ ಸಮಾಧಿ ಈ 100 ತಾಣಗಳ ಪಟ್ಟಿಯಲ್ಲಿವೆ.
ಭಾರತವು ಡಿಸೆಂಬರ್ 1 ರಂದು G20 ನ ವರ್ಷಪೂರ್ತಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. ಭಾರತದಲ್ಲಿ 55 ಸ್ಥಳಗಳಲ್ಲಿ 200 ಕ್ಕೂ ಹೆಚ್ಚು ಸಭೆಗಳು ನಡೆಯಲಿವೆ. ಉದ್ಘಾಟನಾ G20 ಶೃಂಗಸಭೆಯು ಉದಯ್‌ಪುರದ ಮೂರು ಐಷಾರಾಮಿ ಹೋಟೆಲ್‌ಗಳಲ್ಲಿ ನಡೆಯುತ್ತದೆ,