ನವದೆಹಲಿ: ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡುತ್ತಿರುವುದರಿಂದ ಮುಂದಿನ ವರ್ಷದಿಂದ ಕೋವಿಡ್-19 ಲಸಿಕೆಗಳನ್ನು ರಫ್ತು ಮಾಡುವುದನ್ನು ಮರುಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಸರಕಾರದ ಪ್ರಭಾವಿ ತಜ್ಞರ ಸಮಿತಿಯ ಮುಖ್ಯಸ್ಥರು ತಿಳಿಸಿದ್ದಾರೆ.
“ಸುಮಾರು 60 ದೇಶಗಳು ಲಸಿಕೆಯನ್ನು ಪಡೆದಿಲ್ಲ. 2022ರ ವೇಳೆಗೆ ಭಾರತವು ಲಸಿಕೆಯ ಪ್ರಮಾಣವನ್ನು ಗಣನೀಯವಾಗಿ ಒದಗಿಸಬಲ್ಲದು” ಎಂದು ಬ್ಲೂಮ್ ಬರ್ಗ್ ಗೆ ನೀಡಿದ ಸಂದರ್ಶನದಲ್ಲಿ ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ನ ಇಮ್ಯೂನೈಸೇಷನ್ ನ ಅಧ್ಯಕ್ಷ ಎನ್.ಕೆ.ಅರೋರಾ ತಿಳಿಸಿದರು. “ನಮ್ಮ ವಯಸ್ಕ ಜನಸಂಖ್ಯೆಯೊಂದಿಗೆ ವಿಶ್ವದ ಉಳಿದ ಭಾಗಗಳೊಂದಿಗೆ ಹಂಚಿಕೊಳ್ಳಲು ನಾವು ಸಾಕಷ್ಟು ಲಸಿಕೆಯನ್ನು ಹೊಂದಿರಬೇಕು” ಎಂದು ಈ ವೇಳೆ ಹೇಳಿದರು.
ಆರೋಗ್ಯ ಸಮಸ್ಯೆ ಬಗ್ಗೆ ಮಾಹಿತಿ ನೀಡುತ್ತೆ ನಿಮ್ಮ ‘ಜನ್ಮ ದಿನಾಂಕ’…..!
ಜಾಗತಿಕವಾಗಿ ಭಾರತವು 32.5 ಮಿಲಿಯನ್ ಕೊರೋನಾ ಸೋಂಕುಗಳನ್ನು ಹೊಂದಿದೆ. ಹೀಗಾಗಿ 2021ರ ಅಂತ್ಯದ ವೇಳೆಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಆರು ಬಗೆಯ ಲಸಿಕೆಗಳನ್ನು ಹೊಂದಿರಬೇಕು ಎಂದು ಅರೋರಾ ಹೇಳಿದರು.