alex Certify ಚೀನಾದೊಂದಿಗೆ ಗಡಿ ಉದ್ವಿಗ್ನತೆ ನಡುವೆ 5 ಸಾವಿರ ಕಿ.ಮೀ. ಗುರಿ ಹೊಡೆದುರುಳಿಸುವ ಅಗ್ನಿ -5 ಕ್ಷಿಪಣಿ ರಾತ್ರಿ ಪರೀಕ್ಷೆ ಯಶಸ್ವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀನಾದೊಂದಿಗೆ ಗಡಿ ಉದ್ವಿಗ್ನತೆ ನಡುವೆ 5 ಸಾವಿರ ಕಿ.ಮೀ. ಗುರಿ ಹೊಡೆದುರುಳಿಸುವ ಅಗ್ನಿ -5 ಕ್ಷಿಪಣಿ ರಾತ್ರಿ ಪರೀಕ್ಷೆ ಯಶಸ್ವಿ

ನವದೆಹಲಿ: ಭಾರತದಿಂದ ಅಗ್ನಿ -5 ಕ್ಷಿಪಣಿ ಪರೀಕ್ಷೆ ಯಶಸ್ವಿ ಉಡಾವಣೆ ಮಾಡಲಾಗಿದೆ. 5000 ಕಿಲೋಮೀಟರ್ ಗುರಿ ತಲುಪುವ ಅಗ್ನಿ -5 ಕ್ಷಿಪಣಿಯನ್ನು ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಪರೀಕ್ಷೆ ನಡೆಸಲಾಗಿದೆ. ಕ್ಷಿಪಣಿ ಪರೀಕ್ಷೆ ಯಶಸ್ವಿಯಾದ ಬಗ್ಗೆ ರಕ್ಷಣಾ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.

ಚೀನಾದೊಂದಿಗಿನ ಹೆಚ್ಚುತ್ತಿರುವ ಗಡಿ ಉದ್ವಿಗ್ನತೆಯ ನಡುವೆ, ಭಾರತ ಗುರುವಾರ ಅಗ್ನಿ-5 ಪರಮಾಣು ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿಯ ರಾತ್ರಿ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ.

ಅಗ್ನಿ-5 ಕ್ಷಿಪಣಿ 5,000 ಕಿ.ಮೀ.ಗೂ ಮೀರಿದ ಗುರಿಗಳನ್ನು ಅತಿ ಹೆಚ್ಚು ನಿಖರತೆಯೊಂದಿಗೆ ಹೊಡೆಯಬಲ್ಲದು. ಮೊದಲಿಗಿಂತ ಈಗ ಹಗುರವಾಗಿರುವ ಕ್ಷಿಪಣಿಯಲ್ಲಿ ಹೊಸ ತಂತ್ರಜ್ಞಾನಗಳು ಮತ್ತು ಉಪಕರಣಗಳನ್ನು ಮೌಲ್ಯೀಕರಿಸಲು ಪರೀಕ್ಷೆಯನ್ನು ನಡೆಸಲಾಯಿತು. ಅಗತ್ಯವಿದ್ದಲ್ಲಿ ಅಗ್ನಿ-5 ಕ್ಷಿಪಣಿಯ ವ್ಯಾಪ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಪ್ರಯೋಗವು ಸಾಬೀತುಪಡಿಸಿದೆ ಎಂದು ಮೂಲಗಳು ತಿಳಿಸಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...