ಬ್ರಿಡ್ಜ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ ಗಳ ಅಂತರದ ರೋಚಕ ಜಯಗಳಿಸುವ ಮೂಲಕ ಭಾರತ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿದೆ. ಎರಡನೇ ಬಾರಿಗೆ ಭಾರತ ಐಸಿಸಿ ಟಿ20 ವಿಶ್ವಕಪ್ ಗೆದ್ದಿದೆ. ಚೋಕರ್ಸ್ ಎಂಬ ಹಣೆ ಪಟ್ಟಿಯನ್ನು ದಕ್ಷಿಣ ಆಫ್ರಿಕಾ ಉಳಿಸಿಕೊಂಡಿದೆ.
ಭಾರತ ನೀಡಿದ್ದ 177 ರನ್ ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಗೆಲುವಿನ ನಿರೀಕ್ಷೆಯಲ್ಲಿತ್ತಾದರೂ ಅಂತಿಮ ಹಂತದಲ್ಲಿ ಎಡವಿತು. 20 ಓವರ್ ಗಳಲ್ಲಿ 8 ವಿಕೆಟ್ ಗೆ 169 ರನ್ ಗಳಿಸಿ ಸೋಲು ಕಂಡಿತು. ಹೆನ್ರಿಚ್ ಕ್ಲೆಸೆನ್ 52, ಕ್ವಿಂಟನ್ 39, ಟ್ರಿಸ್ಟನ್ 31, ಡೇವಿಡ್ ಮಿಲ್ಲರ್ 21ರನ್ ಗಳಿಸಿದರು. ಭಾರತದ ಪರ ಹಾರ್ದಿಕ್ ಪಾಂಡ್ಯ 3, ಆರ್ಷ್ ದೀಪ್ ಸಿಂಗ್ 2, ಜಸ್ ಪ್ರೀತ್ ಬೂಮ್ರಾ 2 ವಿಕೆಟ್ ಪಡೆದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 7 ವಿಕೆಟ್ ಗೆ 176 ರನ್ ಗಳಿಸಿತು. ವಿರಾಟ್ ಕೊಹ್ಲಿ 76, ಅಕ್ಷರ್ ಪಟೇಲ್ 47, ಶಿವಂ ದುಬೆ 27 ರನ್ ಗಳಿಸಿದರು.