ದೇಶದಲ್ಲಿ ವೈದ್ಯರ ಕೊರತೆಯಿರುವುದನ್ನು ಗಮನಿಸಿದ ಬಾಂಬೈ ಹೈಕೋರ್ಟ್, 2012 ರಲ್ಲಿ ಓಬಿಸಿ ಕೋಟಾದಲ್ಲಿ ತಪ್ಪು ಮಾಹಿತಿ ನೀಡಿ ಎಂಬಿಬಿಎಸ್ ಸೀಟ್ ಪಡೆದಿದ್ದ ವಿದ್ಯಾರ್ಥಿನಿಯ ಪದವಿಯನ್ನು ರದ್ದುಗೊಳಿಸದೇ ತೀರ್ಪು ನೀಡಿದೆ.
2012 ರಲ್ಲಿ ಮುಂಬೈನ ಉನ್ನತ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಕೋರ್ಸ್‌ಗೆ ಹಿಂದುಳಿದ ವರ್ಗದ ಕೋಟಾದಲ್ಲಿ ತಪ್ಪು ಮಾಹಿತಿ ನೀಡಿ ವಿದ್ಯಾರ್ಥಿನಿಯೊಬ್ಬಳು ಪ್ರವೇಶ ಪಡೆದಿದ್ದಳು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯದ ಸದ್ಯ ವಿದ್ಯಾರ್ಥಿನಿ ಕೋರ್ಸ್ ಪೂರ್ಣಗೊಳಿಸಿದ್ದಾಳೆ. ಹಾಗಾಗಿ ಆಕೆಯ ಪದವಿ ರದ್ದುಗೊಳಿಸುವ ಬದಲು ದೇಶದಲ್ಲಿ ವೈದ್ಯರ ಕೊರತೆ ಇರುವುದರಿಂದ ಆಕೆಯ ಸೇವೆ ದೇಶಕ್ಕೆ ಬೇಕಾಗಿದ್ದು ಪದವಿ ಪ್ರಮಾಣ ಪತ್ರ ರದ್ದುಗೊಳಿಸಲ್ಲ ಎಂದು ಹೇಳಿದೆ.
“ನಮ್ಮ ದೇಶದಲ್ಲಿ, ಜನಸಂಖ್ಯೆಗೆ ಅನುಗುಣವಾಗಿ ವೈದ್ಯರ ಅನುಪಾತವು ತುಂಬಾ ಕಡಿಮೆಯಾಗಿದೆ ಆಕೆಯ ಅರ್ಹತೆಯನ್ನು ಹಿಂಪಡೆಯುವುದು ರಾಷ್ಟ್ರೀಯ ನಷ್ಟ. ಏಕೆಂದರೆ ನಾಗರಿಕರು ಓರ್ವ ವೈದ್ಯರಿಂದ ವಂಚಿತರಾಗುತ್ತಾರೆ” ಎಂದು ನ್ಯಾಯಮೂರ್ತಿಗಳಾದ ಎ ಎಸ್ ಚಂದೂರ್ಕರ್ ಮತ್ತು ಜಿತೇಂದ್ರ ಜೈನ್ ಅವರ ವಿಭಾಗೀಯ ಪೀಠ ಹೇಳಿದೆ. ಇದೇ ಸಮಯದಲ್ಲಿ ಒಬಿಸಿ ಕೋಟಾದಡಿ ಪ್ರವೇಶವನ್ನು ಪಡೆಯಲು ಆಕೆಯ ಪೋಷಕರು ಮಾಡಿದ ಅನ್ಯಾಯದ ವಿಧಾನ ಮತ್ತೊಬ್ಬ ಅರ್ಹ ಅಭ್ಯರ್ಥಿಯನ್ನು ವಂಚಿಸಿದೆ ಎಂದು ಹೇಳಿದೆ.
ಸಿಯಾನ್‌ನಲ್ಲಿರುವ ಲೋಕಮಾನ್ಯ ತಿಲಕ್ ವೈದ್ಯಕೀಯ ಕಾಲೇಜು ಫೆಬ್ರವರಿ 2014 ರಲ್ಲಿ MBBS ಕೋರ್ಸ್‌ಗೆ ವಿದ್ಯಾರ್ಥಿನಿಯ ಪ್ರವೇಶವನ್ನು ರದ್ದುಗೊಳಿಸಿತು. ಆದರೆ ಸಮಯ ಮೀರಿದ್ದು ಮತ್ತು ವಿದ್ಯಾರ್ಥಿನಿ ಅಧ್ಯಯನ ಮಾಡಲು ಅನುಮತಿಸಿದ ಮಧ್ಯಂತರ ಆದೇಶಗಳ ಆಧಾರದ ಮೇಲೆ 2017 ರಲ್ಲಿ ಆಕೆ ಕೋರ್ಸ್ ಪೂರ್ಣಗೊಳಿಸಿದ ಕಾರಣ ಪದವಿಯನ್ನು ನೀಡಬೇಕು ಎಂದು ಹೈಕೋರ್ಟ್ ಹೇಳಿದೆ. ಫೆಬ್ರವರಿ 2014 ರಿಂದ ಜಾರಿಯಲ್ಲಿರುವ ಮಧ್ಯಂತರ ಆದೇಶಗಳ ಅಡಿಯಲ್ಲಿ, ಅರ್ಜಿದಾರರು ಎಂಬಿಬಿಎಸ್ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದು ವೈದ್ಯರಾಗುವ ಅರ್ಹತೆ ಪಡೆದ ನಂತರ ಅರ್ಜಿದಾರರು ಪಡೆದ ವಿದ್ಯಾರ್ಹತೆಯನ್ನು ಹಿಂಪಡೆಯುವುದು ಈ ಹಂತದಲ್ಲಿ ಸೂಕ್ತವಲ್ಲ ಎಂದು ನ್ಯಾಯಾಲಯ ಹೇಳಿದೆ.
ಆಕೆಯ ತಾಯಿ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಬಹಿರಂಗಪಡಿಸದೆ ತಂದೆ ತಪ್ಪು ಮಾಹಿತಿ ನೀಡಿದ್ದು ಮಗಳು ಎಂಬಿಬಿಎಸ್ ಗೆ ಪ್ರವೇಶ ಪಡೆದಿದ್ದಳು ಎಂದು ಹೈಕೋರ್ಟ್ ಹೇಳಿದೆ. ಇದೀಗ ಕೋರ್ಸ್‌ಗೆ ಓಪನ್ ಕೆಟಗರಿ ಅಡಿಯ ವಿದ್ಯಾರ್ಥಿಯಾಗಿ ಶುಲ್ಕವನ್ನು ಮೂರು ತಿಂಗಳೊಳಗೆ ಪಾವತಿಸಲು ಮತ್ತು ಹೆಚ್ಚುವರಿಯಾಗಿ ಕಾಲೇಜಿಗೆ 50,000 ರೂಪಾಯಿಗಳನ್ನು ಪಾವತಿಸುವಂತೆ ಹೈಕೋರ್ಟ್ ವಿದ್ಯಾರ್ಥಿನಿಗೆ ಸೂಚಿಸಿದೆ.
2012 ರಲ್ಲಿ, ನಾನ್-ಕ್ರೀಮಿ ಲೇಯರ್ ಪ್ರಮಾಣಪತ್ರದ ಆಧಾರದ ಮೇಲೆ ಎಂಬಿಬಿಎಸ್ ಕೋರ್ಸ್‌ಗಳಲ್ಲಿ ಒಬಿಸಿ ಪ್ರವೇಶಕ್ಕೆ ತನಿಖೆ ಕೋರಿ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಪ್ರವೇಶ ಪಡೆದ ಎಲ್ಲಾ ವಿದ್ಯಾರ್ಥಿಗಳ ವಿರುದ್ಧ ವಿಚಾರಣೆ ನಡೆಸಲಾಯಿತು.
ಅರ್ಜಿದಾರರಾದ ವಿದ್ಯಾರ್ಥಿನಿ ತನ್ನ ತಂದೆ, ತಾಯಿಗೆ ವಿಚ್ಛೇದನ ನೀಡಿದ್ದರಿಂದ ಪ್ರಮಾಣಪತ್ರದಲ್ಲಿ ತನ್ನ ಆದಾಯವನ್ನು ನಮೂದಿಸಿಲ್ಲ ಎಂದು ಹೇಳಿದರು. ನಾನ್ ಕ್ರೀಮಿ ಲೇಯರ್ ಆದಾಯ ಪ್ರಮಾಣಪತ್ರಕ್ಕಾಗಿ 4.5 ಲಕ್ಷ ರೂ. ಆದಾಯ ನಮೂದನೆಯಿಂದ ತಪ್ಪಿಸಿಕೊಳ್ಳಲು ಅವರು ಒಟ್ಟಿಗೆ ಇರುತ್ತಿಲ್ಲ ಎಂದು ಅವರು ಸುಳ್ಳು ಹೇಳಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಹೇಳಿದೆ.