ವಿವಿಧ ಯುಪಿಐಗಳ ಮೂಲಕ ಭಾರತದಲ್ಲಿ ಈ ವರ್ಷದ ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಬರೋಬ್ಬರಿ 9.36 ವ್ಯವಹಾರಗಳು ನಡೆದಿದ್ದು, ಇದರ ಮೊತ್ತ 10.25 ಟ್ರಿಲಿಯನ್ ರೂಪಾಯಿಗಳಾಗಿದೆ.
ಈ ಬಗ್ಗೆ ವರ್ಲ್ಡ್ ವೈಡ್ ಎಂಬ ಸಂಸ್ಥೆ ನಡೆಸಿದ ಅಧ್ಯಯನ ವರದಿಯೊಂದು ಮಾಹಿತಿಗಳನ್ನು ಹೊರ ಹಾಕಿದ್ದು, ಯುಪಿಐನ ಪಿ2ಎಂ (ವ್ಯಕ್ತಿಯಿಂದ ವ್ಯಾಪಾರಿಗೆ) ನಡುವಿನ ವ್ಯವಹಾರ ಹೆಚ್ಚಾಗಿ ನಡೆದಿದೆ. ಅಂದರೆ, ಈ ಮಾದರಿಯು ಮಾರುಕಟ್ಟೆಯ ಶೇಕಡ 64 ರಷ್ಟು ಪಾಲನ್ನು ಹೊಂದಿದ್ದರೆ, ಮೌಲ್ಯದಲ್ಲಿ ಶೇಕಡ 50 ರಷ್ಟು ವ್ಯವಹಾರ ನಡೆಸಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದರೇನು ? ಪಟ್ಟಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ? ಇಲ್ಲಿದೆ ಟಿಪ್ಸ್
2022 ರ ಮೊದಲ ತ್ರೈಮಾಸಿಕದಲ್ಲಿ 14.55 ಬಿಲಿಯನ್ ಟ್ರಾನ್ಸಾಕ್ಷನ್ ಗಳು ನಡೆದಿದ್ದು, ಒಟ್ಟು 26.19 ಟ್ರಿಲಿಯನ್ ರೂಪಾಯಿಯಷ್ಟು ವಹಿವಾಟು ನಡೆದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ವ್ಯವಹಾರ ಮತ್ತು ಮೊತ್ತ ದ್ವಿಗುಣವಾಗಿದೆ. ಟ್ರಾನ್ಸಾಕ್ಷನ್ ನಲ್ಲಿ ಶೇಕಡ 99 ರಷ್ಟು ಮತ್ತು ಮೌಲ್ಯದಲ್ಲಿ ಶೇಕಡ 90 ರಷ್ಟು ಪ್ರಗತಿ ಸಾಧಿಸಲಾಗಿದೆ.
ಮೊದಲ ತ್ರೈಮಾಸಿಕದಲ್ಲಿ ಯುಪಿಐ ಆ್ಯಪ್ ಗಳಾದ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಪೇಮೆಂಟ್ ಬ್ಯಾಂಕ್ ಆ್ಯಪ್, ಅಮೆಜಾನ್ ಪೇ, ಆಕ್ಸಿಸ್ ಬ್ಯಾಂಕ್ ಆ್ಯಪ್ ಮೊದಲ ಸಾಲಿನಲ್ಲಿವೆ. ಫೋನ್ ಪೇ, ಗೂಗಲ್ ಪೇ ಮತ್ತು ಪೇಟಿಎಂ ಯುಪಿಐ ವ್ಯವಹಾರಗಳಲ್ಲಿ ಶೇಕಡ 94.8 ರಷ್ಟು ಪಾಲನ್ನು ಹೊಂದಿದ್ದರೆ, ಮೌಲ್ಯದಲ್ಲಿ ಶೇಕಡ 93 ರಷ್ಟು ಪಾಲನ್ನು ತಮ್ಮದಾಗಿಸಿಕೊಂಡಿವೆ ಎಂದು ವರದಿ ತಿಳಿಸಿದೆ.