ನವದೆಹಲಿ: ಭಾರತದಲ್ಲಿ ಗುರುವಾರ 1,26,789 ಜನರಿಗೆ ಹೊಸದಾಗಿ ಸೋಂಕು ತಗುಲಿರುವುದು ಗೊತ್ತಾಗಿದೆ. 59,258 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 685 ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,66,862 ಕ್ಕೆ ತಲುಪಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ, ಭಾರತದಲ್ಲಿ ಪ್ರಸ್ತುತ ಒಟ್ಟು ಪ್ರಕರಣಗಳು 1,29,28,574, ಬಿಡುಗಡೆಯಾದವರು 1,18,51,393 ಮತ್ತು ಸಕ್ರಿಯ ಪ್ರಕರಣಗಳು 9,10,319 ಇದೆ.