ಹಠಾತ್ ರೈಲು ಪ್ರಯಾಣಕ್ಕೆ ಹೋಗಿ ತತ್ಕಾಲ್ ಟಿಕೆಟ್ ಕಾಯ್ದಿರಿಸಲು ತೊಂದರೆ ಅನುಭವಿಸುತ್ತಿರುವವರಿಗೆ ಈ ಸುದ್ದಿ ಸಂತಸ ನೀಡಲಿದೆ. ತತ್ಕಾಲ್ ಟಿಕೆಟ್ ಬುಕ್ಕಿಂಗ್ ಅನ್ನು ಸುಲಭಗೊಳಿಸಲು ರೈಲ್ವೇ ಇಲಾಖೆ, ಪ್ರತ್ಯೇಕ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಆ್ಯಪ್‌ಗೆ ಕನ್‌ಫರ್ಮ್ ಟಿಕೆಟ್ ಆ್ಯಪ್ ಎಂದು ಹೆಸರಿಸಲಾಗಿದ್ದು, ಇದನ್ನು ಮೊಬೈಲ್‌ನಲ್ಲಿ ಸುಲಭವಾಗಿ ಡೌನ್‌ಲೋಡ್ ಮಾಡಿ ತಕ್ಷಣಕ್ಕೆ ಟಿಕೆಟ್ ಬುಕಿಂಗ್ ಮಾಡಬಹುದು.
ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಪ್ರಕ್ರಿಯೆಯನ್ನು ಸುಲಭಗೊಳಿಸಲು ಈ ಆ್ಯಪ್ ಬಿಡುಗಡೆ ಮಾಡಿರುವ ಇಲಾಖೆ, ಈ ಆ್ಯಪ್ ಮೂಲಕ ಪ್ರಯಾಣಿಕರು ತಮ್ಮ ಮನೆಯ ಸೌಕರ್ಯದಿಂದ ತುರ್ತು ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಬಹುದಾದ ಸೌಲಭ್ಯ ನೀಡುತ್ತಿದೆ. ಕನ್‌ಫರ್ಮ್ ಟಿಕೆಟ್ ಆ್ಯಪ್‌ನ ಸಹಾಯದಿಂದ ಪ್ರಯಾಣಿಕರು ವಿವಿಧ ರೈಲುಗಳಲ್ಲಿ ಸೀಟುಗಳ ಲಭ್ಯತೆಯನ್ನು ಪರಿಶೀಲಿಸಬಹುದು.
ಈ ಅಪ್ಲಿಕೇಶನ್ ಆಯಾ ಮಾರ್ಗದಲ್ಲಿ ಲಭ್ಯವಿರುವ ಎಲ್ಲಾ ತತ್ಕಾಲ್ ಟಿಕೆಟ್‌ಗಳನ್ನು ಸಹ ತೋರಿಸುತ್ತದೆ. ಈ ಅಪ್ಲಿಕೇಶನ್‌ನಲ್ಲಿ ವಿವರಗಳನ್ನು ಪಡೆಯಲು ಪ್ರಯಾಣಿಕರು ಇನ್ನು ಮುಂದೆ ರೈಲು ಸಂಖ್ಯೆಯನ್ನು ನಮೂದಿಸುವ ಅಗತ್ಯವಿಲ್ಲ. ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ವಿಶೇಷವೆಂದರೆ ಕನ್ಫರ್ಮ್ ಟಿಕೆಟ್ ಆ್ಯಪ್ ಉಚಿತ ಟಿಕೆಟ್ ರದ್ದತಿ ಸೌಲಭ್ಯವನ್ನೂ ಒದಗಿಸುತ್ತದೆ.
ಲಾಗಿನ್ ಮಾಡುವಾಗ ವೈಯಕ್ತಿಕ ಮಾಹಿತಿಯನ್ನು ಉಳಿಸಲು ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ. ಹೀಗೆ ಮಾಡುವುದರಿಂದ ಪ್ರಯಾಣಿಕರ ಸಮಯ ಉಳಿತಾಯವಾಗುತ್ತದೆ. ಅಂದರೆ, ಪ್ರತಿ ಬಾರಿ ಮಾಹಿತಿಯನ್ನು ನಮೂದಿಸುವ ಅಗತ್ಯವನ್ನು ತೆಗೆದುಹಾಕಲಾಗುತ್ತದೆ. ಆದಾಗ್ಯೂ, ತತ್ಕಾಲ್ ಬುಕಿಂಗ್ ಆಸನಗಳ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ಈ ಅಪ್ಲಿಕೇಶನ್‌ನಲ್ಲಿ ಟಿಕೆಟ್ ವೇಟಿಂಗ್ ಲಿಸ್ಟ್ ಕಾಣಿಸಿಕೊಳ್ಳುತ್ತದೆ. ಆದರೆ ಪಾವತಿಯ ನಂತರ ಆಸನ ಲಭ್ಯವಾದ ತಕ್ಷಣ ನಿಮಗೆ ದೃಡೀಕೃತ ಟಿಕೆಟ್ ದೊರೆಯುತ್ತದೆ.
ಕನ್ಫರ್ಮ್ ಟಿಕೆಟ್ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಅಥವಾ ಐಆರ್‌ಸಿಟಿಸಿ ನೆಕ್ಸ್ಟ್ ಜನರೇಷನ್ ಆ್ಯಪ್ ಮೂಲಕ ಡೌನ್‌ಲೋಡ್ ಮಾಡಬಹುದು. IRCTC ವೆಬ್‌ಸೈಟ್ www.irctc.co.in ನಲ್ಲಿಯೂ ಈ ಬಗ್ಗೆ ವಿವರಗಳನ್ನು ನೀಡಲಾಗಿದೆ. ಇನ್ನುಳಿದಂತೆ ಅಪ್ಲಿಕೇಶನ್ ಮೂಲಕ ತತ್ಕಾಲ್ ಟಿಕೆಟ್‌ಗಳಿಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ ಎಂಬುದು ಗಮನಾರ್ಹ.