ಭಾರತೀಯ ಅಂಚೆ ಇಲಾಖೆ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕಚೇರಿ, ಬಿಹಾರ ಸರ್ಕಲ್ ಅಧಿಕೃತ ವೆಬ್‌ಸೈಟ್‌ನಲ್ಲಿ ಹಲವಾರು ಖಾಲಿ ಹುದ್ದೆಗಳ ನೇಮಕಾತಿ ಮಾಹಿತಿ ಪ್ರಕಟಿಸಿದೆ.
www.indiapost.gov.in ನಲ್ಲಿ ಬಿಡುಗಡೆಯಾದ ಅಧಿಸೂಚನೆಯ ಪ್ರಕಾರ, ಸ್ಪೋರ್ಟ್ಸ್ ಕೋಟಾ ಅಡಿಯಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು.
ಅಂಚೆ/ ವಿಂಗಡಣೆ ಸಹಾಯಕ, ಪೋಸ್ಟ್ ಮ್ಯಾನ್, ಮಲ್ಟಿ-ಟಾಸ್ಕಿಂಗ್ ಸ್ಟಾಫ್(MTS) ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅಂಚೆ ಸಹಾಯಕ – 31, ವಿಂಗಡಣೆ ಸಹಾಯಕ – 11, ಪೋಸ್ಟ್ ಮ್ಯಾನ್ – 05, ಎಂಟಿಎಸ್ – 13 ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 31, 2021 ರವರೆಗೆ ಅರ್ಜಿ ಸಲ್ಲಿಸಬಹುದು. ನೇಮಕಾತಿಗೆ ಸಂಬಂಧಿಸಿದ ವಿವರಗಳಿಗೆ ವೆಬ್ ಸೈಟ್ ಗಮನಿಸಬಹುದಾಗಿದೆ.