ಅಂಚೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕಚೇರಿ, ಬಿಹಾರ ವೃತ್ತ, ಅಧಿಕೃತ ವೆಬ್‌ಸೈಟ್ www.indiapost.gov.in ನಲ್ಲಿ ಮಾಹಿತಿ ನೀಡಲಾಗಿದೆ.
ಅಂಚೆ/ವಿಂಗಡಣಾ ಸಹಾಯಕರು, ಪೋಸ್ಟ್ ಮ್ಯಾನ್ ಗಳು ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್(MTS) ಗೆ ನೇಮಕಾತಿ ನಡೆಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಖಾಲಿ ಹುದ್ದೆಗಳ ಸಂಖ್ಯೆ
ಅಂಚೆ ಸಹಾಯಕ – 31
ವಿಂಗಡಣೆ ಸಹಾಯಕ – 11
ಪೋಸ್ಟ್ ಮ್ಯಾನ್ – 05
MTS – 13
ವಯೋಮಿತಿ
ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆ: ಡಿಸೆಂಬರ್ 31, 2021 ರಂತೆ, ಅಭ್ಯರ್ಥಿಯು 18 ರಿಂದ 27 ವರ್ಷ ವಯಸ್ಸಿನವರಾಗಿರಬೇಕು.
ಪೋಸ್ಟ್ ಮ್ಯಾನ್: ಡಿಸೆಂಬರ್ 31, 2021 ರಂತೆ, ಅಭ್ಯರ್ಥಿಯು 18 ರಿಂದ 27 ವರ್ಷ ವಯಸ್ಸಿನವರಾಗಿರಬೇಕು.
MTS ಸಿಬ್ಬಂದಿ: ಡಿಸೆಂಬರ್ 31, 2021 ರಂತೆ, ಅಭ್ಯರ್ಥಿಯು 18 ರಿಂದ 25 ವರ್ಷ ವಯಸ್ಸಿನವರಾಗಿರಬೇಕು.
ಸಂಬಳ
ಪೋಸ್ಟಲ್/ಸಾರ್ಟಿಂಗ್ ಅಸಿಸ್ಟೆಂಟ್ – ಪೇ ಮ್ಯಾಟ್ರಿಕ್ಸ್‌ನಲ್ಲಿ ಹಂತ 4(25,500-81,100 ರೂ.).
ಪೋಸ್ಟ್ ಮ್ಯಾನ್ – ಪೇ ಮ್ಯಾಟ್ರಿಕ್ಸ್ ನಲ್ಲಿ ಹಂತ 3 (21,700-69,100 ರೂ).
ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ – ಪೇ ಮ್ಯಾಟ್ರಿಕ್ಸ್ ನಲ್ಲಿ ಹಂತ 1 (18,000-56,900 ರೂ.).
ಕೊನೆಯ ದಿನಾಂಕ
ಅರ್ಹ ಮತ್ತು ಆಸಕ್ತ ಭಾರತೀಯ ಅಭ್ಯರ್ಥಿಗಳು ಡಿಸೆಂಬರ್ 31, 2021 ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. www.indiapost.gov.in ವೆಬ್ ಸೈಟ್ ನಲ್ಲಿ ಅಧಿಸೂಚನೆ ಗಮನಿಸಬಹುದಾಗಿದೆ.