ನವದೆಹಲಿ: ಅಂಚೆ ಇಲಾಖೆಯ ಗ್ರಾಮೀಣ ಪೋಸ್ಟ್ ಡಾಕ್ ಸೇವಕ್(ಜಿಡಿಎಸ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಭಾರತೀಯ ಅಂಚೆ ಇಲಾಖೆ ಉತ್ತರ ಪ್ರದೇಶ ಅಂಚೆ ವೃತ್ತಕ್ಕೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಇಂಡಿಯಾ ಪೋಸ್ಟ್ 4,000 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಶಾಖೆಯ ಪೋಸ್ಟ್ ಮಾಸ್ಟರ್(ಬಿಪಿಎಂ), ಸಹಾಯಕ ಶಾಖೆಯ ಪೋಸ್ಟ್ ಮಾಸ್ಟರ್(ಎಬಿಪಿಎಂ) ಮತ್ತು ಡಾಕ್ ಸೇವಕರ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು india Post- appost.in. ಅಧಿಕೃತ ವೆಬ್‌ಸೈಟ್ ನಲ್ಲಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 22, 2021.
ಅಭ್ಯರ್ಥಿಗಳು 10 ನೇ ತರಗತಿಯ ಪ್ರೌಢ ಶಾಲಾ ಪರೀಕ್ಷೆಯ ಪಾಸ್ ಸರ್ಟಿಫಿಕೇಟ್ ಅನ್ನು ಗಣಿತ, ಸ್ಥಳೀಯ ಭಾಷೆ ಮತ್ತು ಇಂಗ್ಲೀಷ್(ಕಡ್ಡಾಯ ಅಥವಾ ಆಯ್ಲೆ ವಿಷಯಗಳಂತೆ ಅಧ್ಯಯನ ಮಾಡಿ) ಉತ್ತೀರ್ಣ ಅಂಕಗಳೊಂದಿಗೆ ಯಾವುದೇ ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿರಬೇಕು.
ಅಭ್ಯರ್ಥಿಯು ಕನಿಷ್ಠ 10 ನೇ ತರಗತಿಯವರೆಗೆ(ಕಡ್ಡಾಯ ಅಥವಾ ಆಯ್ಕೆ ಐಚ್ಛಿಕ ವಿಷಯಗಳಂತೆ) ಸ್ಥಳೀಯ ಭಾಷೆಯನ್ನು ಅಧ್ಯಯನ ಮಾಡಿರಬೇಕು.
ಆಗಸ್ಟ್ 23, 2021 ರಂತೆ, ಅಭ್ಯರ್ಥಿಯ ವಯಸ್ಸು 18 ರಿಂದ 40 ವರ್ಷಗಳ ನಡುವೆ ಇರಬೇಕು. ನಿರ್ದಿಷ್ಟ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಅಭ್ಯರ್ಥಿಗಳನ್ನು ಅವರ ಆನ್‌ಲೈನ್ ಸಲ್ಲಿಸಿದ ಅರ್ಜಿ ನಮೂನೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ನಿಯಮಗಳ ಪ್ರಕಾರ ಸ್ವಯಂಚಾಲಿತ ಮೆರಿಟ್ ಪಟ್ಟಿಯನ್ನು ರಚಿಸಲಾಗುತ್ತದೆ.
ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಜಿಡಿಎಸ್ ನೇಮಕಾತಿ ಸಂಪೂರ್ಣ ಅಧಿಸೂಚನೆಯನ್ನು ಓದಲು ಸೂಚಿಸಲಾಗಿದೆ.