ದೇಶದ ಕೆಲವು ಭಾಗಗಳಲ್ಲಿ 2023ರ ಏಪ್ರಿಲ್ ತಿಂಗಳಿನಿಂದ 20% ಎಥೆನಾಲ್ ಮಿಶ್ರಿತ ಗ್ಯಾಸೋಲಿನ್ ಪೂರೈಸಲು ಈ ಯೋಜನೆಯ ನಿಕಟ ಮಾಹಿತಿ ಹೊಂದಿರುವ ಮೂಲಗಳು ತಿಳಿಸಿವೆ. ರಾಷ್ಟ್ರವು 2025-26ರ ಸುಮಾರಿಗೆ ದೇಶಾದ್ಯಂತ ಇದನ್ನು ಪರಿಚಯಿಸಲು ಉದ್ದೇಶಿಸಿದೆ.
ತೀವ್ರವಾಗಿ ಏರಿಕೆಯಾಗುತ್ತಿರುವ ತೈಲ ದರದಿಂದ ಚಿಂತೆಗೀಡಾಗಿರುವ ಭಾರತವು, ಸ್ಥಳೀಯವಾಗಿ ತೈಲ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಪರ್ಯಾಯ ಇಂಧನಗಳನ್ನು ಪರಿವರ್ತಿಸಿ ಆಮದು ಸುಂಕವನ್ನು ಉಳಿಸಲು ಯೋಜನೆಗಳನ್ನು ರೂಪಿಸಿದೆ.
ಮಾಯಿಶ್ಚರೈಸರ್ ಗಿಂತ ಅಧಿಕ ಗುಣ ತೆಂಗಿನೆಣ್ಣೆಯಲ್ಲಿದೆ
ಕಳೆದ ಮೂರು ತಿಂಗಳಿಂದ ಭಾರತವು 10.5% ಎಥೆನಾಲ್ ಅನ್ನು ಗ್ಯಾಸೋಲಿನ್ ಜತೆಗೆ ಬೆರೆಸಿ ವಿತರಿಸುತ್ತಿದೆ. ವಿಶ್ವದ ಮೂರನೇ ಅತಿ ದೊಡ್ಡ ತೈಲ ಆಮದುದಾರ ದೇಶವಾಗಿರುವ ಭಾರತವು ತನ್ನ ಬೇಡಿಕೆಯ ಸುಮಾರು 85% ವಿದೇಶಿ ಪೂರೈಕೆದಾರರನ್ನು ಅವಲಂಬಿಸಿದೆ. ಕೋವಿಡ್ ಸ್ಥಿತಿಯಲ್ಲಿ ಹಾಗೂ ಆ ಬಳಿಕ ಉಷ್ಣ ಅಲೆಯಿಂದ ಪಾರಾಗಲು ಭಾರತೀಯರು ಸ್ವಂತ ವಾಹನಗಳಲ್ಲಿ ಪಯಣಿಸುವುದನ್ನು ಆಯ್ಕೆ ಮಾಡಿಕೊಂಡಿದ್ದರಿಂದ, ತೈಲಕ್ಕೆ ಬೇಡಿಕೆ ಹಠಾತ್ತಾಗಿ ಹೆಚ್ಚಿದೆ. ಹೀಗಾಗಿ, ಎಥೆನಾಲ್ ಮಿಶ್ರಣದಿಂದ ಈ ಆರ್ಥಿಕ ವರ್ಷದಲ್ಲಿ 500 ಶತಕೋಟಿ ರೂ.ಗಳನ್ನು ಉಳಿಸಲು ಸರ್ಕಾರ ಆಶಿಸುತ್ತಿದೆ.