
ದೇಶಿಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆ ಒಂದೇ ಸಮನೆ ಏರಿಕೆ ಕಾಣಿಸಿಕೊಳ್ತಿದೆ. ಇದನ್ನ ನಿಯಂತ್ರಿಸಲು ಭಾರತ ಸರ್ಕಾರ ಕೆಲವು ತೈಲಗಳ ಮೇಲಿನ ತೆರಿಗೆಯನ್ನ ಕಡಿಮೆ ಮಾಡಲು ಮುಂದಾಗಿದೆ.
ಉಕ್ರೇನ್ ಬಿಕ್ಕಟ್ಟು ಮತ್ತು ಇಂಡೋನೇಷ್ಯಾ ತಾಳೆ ಎಣ್ಣೆ ರಫ್ತಿನ ಮೇಲೆ ನಿಷೇಧದ ನಂತರ ತೈಲ ಬೆಲೆ ಒಂದೇ ಸಮೆನೆ ಏರುತ್ತಲೇ ಹೋಗಿದೆ. ಈ ನಿಟ್ಟಿನಲ್ಲಿ ಸರ್ಕಾರ, ತೆರಿಗೆಗೆ ಬ್ರೇಕ್ ಹಾಕುವುದರಿಂದ ಜನಸಾಮಾನ್ಯನಿಗೆ ಆಗಲಿರೋ ಹೊರೆಯನ್ನ ಕೊಂಚ ಮಟ್ಟಿಗೆ ಕಡಿಮೆ ಮಾಡುವ ಪ್ರಯತ್ನಕ್ಕೆ ಮುಂದಾಗಿದೆ.
ಭಾರತ ವಿಶ್ವದಲ್ಲೇ ಅತಿ ಹೆಚ್ಚು ಸಸ್ಯಗಳಿಂದಲೇ ತಯಾರಾಗುವ ಎಣ್ಣೆಯನ್ನ ಬೇರೆ-ಬೇರೆ ರಾಷ್ಟ್ರದಿಂದ ಆಮದು ಮಾಡಿಕೊಳ್ಳುತ್ತೆ. ಈ ಕಾರಣಕ್ಕೆ ತಾಳೆ ಎಣ್ಣೆಯ ಆಮದು ಮೇಲಿನ ಎಗ್ರಿಕಲ್ಚರ್ಇಂಫ್ರಾಸ್ಟ್ರಕ್ಚರ್ ಸೆಸ್ ಇವನ್ನು ಶೇಕಡಾ 5ಕ್ಕಿಂತಲೂ ತೆಗೆದುಹಾಕುವುದಕ್ಕೆ ಆಲೋಚನೆ ಮಾಡಲಾಗುತ್ತಿದೆ. ಇದರ ನಂತರವೂ ಎಷ್ಟು ಪ್ರಮಾಣದ ತೆರಿಗೆ ಕಡಿಮೆ ಮಾಡಲಾಗುವುದು ಅನ್ನೊಂದು ಇನ್ನೂ ಸ್ಪಷ್ಟಪಡಿಸಿಲ್ಲ.
Shocking News: ಶಾಲೆಗೆ ನುಗ್ಗಿ ಬಾಲಕಿಯರ ಬಟ್ಟೆ ಬಿಚ್ಚಿಸಿದ ಕಿರಾತಕ
ಈಗಾಗಲೇ ಮೂಲ ತೆರಿಗೆ ದರಗಳ ಮೇಲೆ ಬೇರೆ ಬೇರೆ ರೀತಿಯ ಟ್ಯಾಕ್ಸ್ ಗಳನ್ನ ಹಾಕಲಾಗುತ್ತೆ. ಈ ಟ್ಯಾಕ್ಸ್ ಹಣವನ್ನ ಕೃಷಿಗೆ ಸಂಬಂಧಿಸಿದಂತೆ ಬೇರೆ ಬೇರೆ ವಿಭಾಗಗಳಲ್ಲಿ ಬಳಕೆ ಮಾಡಲಾಗುತ್ತೆ. ಕಚ್ಚಾ ತಾಳೆ ಎಣ್ಣೆಯ ಮೇಲಿನ ಮೂಲ ಆಮದು ಸುಂಕವನ್ನ ಸರ್ಕಾರ ಈಗಾಗಲೇ ರದ್ದುಗೊಳಿಸಿದೆ. ಈಗ ಇದರ ಕುರಿತು ಇನ್ನೂ ಹೆಚ್ಚಿನ ಮಾಹಿತಿಯನ್ನು ಹಣಕಾಸು ಇಲಾಖೆಯಾಗಲಿ ಇಲ್ಲಾ ಕೃಷಿ ಇಲಾಖೆಯಾಗಲಿ ಸ್ಪಷ್ಟಪಡಿಸಿಲ್ಲ.