ನವದೆಹಲಿ : 21 ನೇ ಶತಮಾನದ ಭಾರತವು ಸಣ್ಣದಾಗಿ ಯೋಚಿಸುವುದನ್ನು ನಿಲ್ಲಿಸಿದೆ. ಭಾರತದ ಸಾಧನೆಗಳನ್ನು ನೋಡಿ ಜಗತ್ತು ಆಶ್ಚರ್ಯಚಕಿತವಾಗಿದೆ. ಭಾರತದೊಂದಿಗೆ ನಡೆಯುವುದರಿಂದ ಆಗುವ ಪ್ರಯೋಜನವನ್ನು ಜಗತ್ತು ನೋಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸೋಮವಾರ (ಫೆಬ್ರವರಿ 26, 2024) ನಡೆದ ನ್ಯೂಸ್ 9 ಜಾಗತಿಕ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ಮನಸ್ಥಿತಿ (ಆಲೋಚನಾ ವಿಧಾನ) ಬದಲಾವಣೆಯನ್ನು ತೋರಿಸಿದೆ. ಈಗ ಪ್ರತಿಯೊಬ್ಬ ಭಾರತೀಯನು ತಾನು ಏನು ಬೇಕಾದರೂ ಮಾಡಬಹುದು ಮತ್ತು ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಭಾವಿಸುತ್ತಾನೆ ಎಂದರು.
ತಮ್ಮ ನೇತೃತ್ವದ ಎನ್ಡಿಎ ಸರ್ಕಾರದ 10 ವರ್ಷಗಳಲ್ಲಿ 640 ಬಿಲಿಯನ್ ಡಾಲರ್ ವಿದೇಶಿ ಹೂಡಿಕೆ ಭಾರತಕ್ಕೆ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಮೊದಲ, ಎರಡನೇ ಮತ್ತು ಮೂರನೇ ಕೈಗಾರಿಕಾ ಕ್ರಾಂತಿಯಲ್ಲಿ ನಾವು ಹಿಂದುಳಿದಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ನಾವು ಜಗತ್ತನ್ನು ಮುನ್ನಡೆಸಬೇಕಾಗಿದೆ. ನಾವು ಗರೀಬಿ ಹಟಾವೋ ಘೋಷಣೆಯನ್ನು ಮಾತ್ರ ಕೇಳಿದ್ದೆವು ಆದರೆ ನಮ್ಮ ಸರ್ಕಾರವು ಹೆಚ್ಚಿನ ಸಂಖ್ಯೆಯ ಜನರನ್ನು ಬಡತನ ರೇಖೆಯಿಂದ ಹೊರಗಿಟ್ಟಿತು ಎಂದು ಹೇಳಿದರು.
ಭಾರತ ಮುಂದಿನ ದೊಡ್ಡ ಜಿಗಿತಕ್ಕೆ ಸಜ್ಜಾಗಿದೆ ಎಂಬ ವಿಷಯದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತವು ದೊಡ್ಡ ಹೆಜ್ಜೆ ಇಡಲು ಸಿದ್ಧವಾಗಿದೆ ಎಂದು ಇಂದು ಜಗತ್ತು ಭಾವಿಸಿದರೆ, ಅದರ ಹಿಂದೆ 10 ವರ್ಷಗಳ ಪ್ರಬಲ ಉಡಾವಣಾ ಪ್ಯಾಡ್ ಇದೆ. ದಶಕಗಳಿಂದ ಬಾಕಿ ಉಳಿದಿದ್ದ ಯೋಜನೆಗಳು ನಮ್ಮ ಸರ್ಕಾರದಲ್ಲಿ ಪೂರ್ಣಗೊಂಡಿವೆ ಎಂದು ತಿಳಿಸಿದ್ದಾರೆ.