ದೃಷ್ಟಿ ಭ್ರಮಣೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲೂ ಜನಪ್ರಿಯವಾಗಿದ್ದು, ಭಾರೀ ಬೇಗ ವೈರಲ್ ಆಗಿಬಿಡುತ್ತವೆ. ನಮ್ಮ ಮೆದುಳಿಗೆ ಸವಾಲೆಸೆಯುವ ಈ ಚಿತ್ರಗಳನ್ನು ನೆಟ್ಟಿಗರು ಸಖತ್ ಇಷ್ಟ ಪಡುತ್ತಾರೆ.
2019ರಲ್ಲಿ ಪೋಸ್ಟ್ ಮಾಡಲಾಗಿದ್ದ ಚಿರತೆಯ ಚಿತ್ರವೊಂದು ಸದ್ದು ಮಾಡಿತ್ತು. ಈ ಚಿತ್ರದಲ್ಲಿ ಚಿರತೆಯು ತನ್ನ ಸುತ್ತಲಿನ ಪರಿಸರದಲ್ಲಿ ತನ್ನನ್ನು ತಾನು ಯಾರಿಗೂ ಕಾಣದಂತೆ ಅವಿತುಕೊಂಡಿತ್ತು.
ಶಿರಸಿಯ ಪ್ರಸಿದ್ಧ ಕ್ಷೇತ್ರ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿದ್ದೀರಾ…..?
ಈಗ ಇಂಥದ್ದೇ ಮತ್ತೊಂದು ಚಿತ್ರವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ರಮೇಶ್ ಪಾಂಡೆ ಶೇರ್ ಮಾಡಿದ್ದಾರೆ. ಓವರ್‌ಹೆಡ್ ಶಾಟ್ ಆಗಿರುವ ಈ ಚಿತ್ರದಲ್ಲಿ ಚಿರತೆಯೊಂದು ಗೋಧಿ ಬೆಳೆಯ ನಡುವೆ ಸೇರಿಕೊಂಡಿರುವುದನ್ನು ಕಾಣಬಹುದಾಗಿದೆ. ಈ ಚಿತ್ರವೂ ಸಹ ದೃಷ್ಟಿ ಭ್ರಮಣೆ ತರಿಸುವಂತಿದ್ದು, ನೆಟ್ಟಿಗರಿಗೆ ಚಿರತೆ ಹುಡುಕುವುದು ಮೆದುಳಿಗೆ ಒಳ್ಳೆ ಕೆಲಸ ಕೊಡಲಿದೆ.