
ಮಹಿಳೆ ಸಿಬ್ಬಂದಿಯು ವರ್ಷಕ್ಕೆ 10 ದಿನ ಮುಟ್ಟಿನ ರಜೆ ಪಡೆಯಬಹುದು ಎಂದು ಜೊಮ್ಯಾಟೋ ಘೋಷಿಸಿದೆ.
ಆಹಾರ ತಲುಪಿಸುವ ಅತಿದೊಡ್ಡ ಸಂಸ್ಥೆಯಾದ ಜೊಮ್ಯಾಟೋದ ಸಿಇಒ ದೀಪಿಂದರ್ ಗೋಯಲೆ ಅವರು ಮಹಿಳಾ ಸಿಬ್ಬಂದಿಗೆ ಈ ಕುರಿತು ಇ-ಮೇಲ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಮುಟ್ಟಿನ ರಜೆ ಪಡೆಯಲು ಯಾರೂ ನಾಚಿಕೆಪಡುವ ಆವಶ್ಯಕತೆ ಇಲ್ಲ. ಆಪ್ತರಲ್ಲಿ ಹೇಳಿಕೊಳ್ಳಿ. ಆರಾಮವಾಗಿರಿ. ಇ-ಮೇಲ್ ಮಾಡಿ ರಜೆ ಪಡೆಯಿರಿ. ಅಂಜಿಕೆ, ಅಳುಕು ಬೇಡ ಎಂದಿದ್ದಾರೆ.