ಜನಪ್ರಿಯ ಹ್ಯೂಮನ್ಸ್ ಆಫ್ ಬಾಂಬೆ ಫೇಸ್ಬುಕ್ ಪುಟದಲ್ಲಿ ವೃದ್ಧೆಯೊಬ್ಬರು ವಾರದ ಹಿಂದೆ ನೂರನೇ ವರ್ಷದ ಜನ್ಮದಿನವನ್ನ ಆಚರಿಸಿರುವ ಕುರಿತು ಪೋಸ್ಟ್ ಮಾಡಲಾಗಿದೆ. ಈ ವೇಳೆ ಅವರು ತಮ್ಮ ಜೀವನದ ಅನುಭವವನ್ನ ಈ ಖಾತೆಯಲ್ಲಿ ಆರ್ಟಿಕಲ್ ಮೂಲಕ ಶೇರ್ ಮಾಡಿದ್ದು ಸಖತ್ ವೈರಲ್ ಆಗಿದೆ. ಈ ಪೋಸ್ಟ್ನ್ನ ಫೇಸ್ಬುಕ್ ಮಾತ್ರವಲ್ಲದೇ ಇನ್ಸ್ಟಾಗ್ರಾಂನಲ್ಲೂ ಶೇರ್ ಮಾಡಲಾಗಿದೆ.
ಮಗುವೇ, ನನಗೀಗ 100 ವರ್ಷ, ನಾನು ಎಲ್ಲವನ್ನ ನೋಡಿದ್ದೇನೆ ಎಂಬ ಸಾಲಿನ ಮೂಲಕ ಈ ಲೇಖನ ಆರಂಭವಾಗುತ್ತೆ. ಭಾರತದಲ್ಲಿನ ಸ್ವಾತಂತ್ರ್ಯ ಚಳವಳಿಯಿಂದ ಹಿಡಿದು ಎರಡನೇ ಮಹಾಯುದ್ಧಕ್ಕೂ ಮೊದಲು ಹಿಟ್ಲರ್ ಅಧಿಕಾರವನ್ನೂ ನಾನು ಕಂಡಿದ್ದೇನೆ.
ಈಗ ಬಂದಿರುವ ಕೊರೊನಾಗಿಂತಲೂ ಕೆಟ್ಟ ಕಾಯಿಲೆಯನ್ನ ನಾನು ಕಂಡಿದ್ದೇನೆ. ನಿಮಗಿಂತಲೂ ಮೊದಲು ನಾನು ಸಾಂಕ್ರಾಮಿಕ ಎಂಬ ಪದವನ್ನ ಕಲಿತಿದ್ದೇನೆ ಎಂದು ಹೇಳಿದ್ದಾರೆ.
ಕಟ್ಟುನಿಟ್ಟಿನ ಪತಿಯನ್ನ ಹೊಂದಿದ್ದರೂ ಸಹ ಅವರು ಮಗನಿಗೆ ಎಷ್ಟು ಸ್ವಾತಂತ್ರ್ಯ ನೀಡಿದ್ದರೆಂದರೆ ಮಗನಿಗೆ ಅಂತರ್ಜಾತಿ ವಿವಾಹವಾಗುವಂತೆ ಪ್ರೋತ್ಸಾಹಿಸಿದ್ದಾರೆ.
ಅಲ್ಲದೇ ಈಗಿನ ಕಾಲದ ಜನಕ್ಕೂ ಅವರು ಸಲಹೆಯನ್ನ ನೀಡಿದ್ದಾರೆ. ಬದುಕಿ ಹಾಗೂ ಬದುಕಲು ಬಿಡಿ ಎಂದು ಜನತೆಗೆ ಕರೆ ನೀಡಿದ್ದಾರೆ.