alex Certify ಯೂಟ್ಯೂಬ್ ಹೊಸ ನಿಯಮ: ಪೋಷಕರಿಗೆ ಸಿಗಲಿದೆ ಮಕ್ಕಳ ವೀಕ್ಷಣೆ ಮೇಲಿನ ನಿರ್ಬಂಧದ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯೂಟ್ಯೂಬ್ ಹೊಸ ನಿಯಮ: ಪೋಷಕರಿಗೆ ಸಿಗಲಿದೆ ಮಕ್ಕಳ ವೀಕ್ಷಣೆ ಮೇಲಿನ ನಿರ್ಬಂಧದ ಅವಕಾಶ

ಆನ್ಲೈನ್ ವಿಡಿಯೋ ಶೇರಿಂಗ್ ಪ್ಲಾಟ್‌ಫಾರಂ ಯೂಟ್ಯೂಬ್‌ ಹೊಸ ಫೀಚರ್‌ ಒಂದು ಲಾಂಚ್‌ ಮಾಡುತ್ತಿದ್ದು, ಈ ಮೂಲಕ ತಮ್ಮ ಮಕ್ಕಳು ಏನೆಲ್ಲಾ ಕಂಟೆಂಟ್ ನೋಡಬಹುದು ಎಂದು ಪೋಷಕರು ನಿರ್ಧರಿಸಬಹುದಾಗಿದೆ.

’ಸೂಪರ್ವೈಸ್ಡ್‌ ಎಕ್ಸ್‌ಪೀರಿಯೆನ್ಸಸ್’ ಹೆಸರಿನ ಈ ಫೀಚರ್‌ ಮೂಲಕ ನಿರ್ಬಂಧಗಳ ಗುಚ್ಛವೊಂದನ್ನು ಕೊಡಲಾಗಿದ್ದು, ಪೋಷಕರು ತಮ್ಮ ಮಕ್ಕಳು ವಿಡಿಯೋ ಪ್ಲಾಟ್‌ಫಾರಂನಲ್ಲಿ ಏನೆಲ್ಲಾ ಅಕ್ಸೆಸ್ ಮಾಡಬಹುದು ಎಂದು ನಿರ್ಧಾರ ಮಾಡಬಹುದು. ಮೂರು ಹಂತಗಳ ನಿರ್ಬಂಧದ ಮೂಲಕ ಮಕ್ಕಳು ಯಾವೆಲ್ಲಾ ವಯಸ್ಸಿಗೆ ಏನೆಲ್ಲಾ ನೋಡಬಹುದು ಎಂದು ಪೋಷಕರು ನಿರ್ಧರಿಸಬಹುದು.

ಬೆರಗಾಗಿಸುತ್ತೆ ಅಜ್ಜಿ – ಮೊಮ್ಮಗನ ಬೊಂಬಾಟ್ ಡಾನ್ಸ್…!

ಕಂಟೆಂಟ್ ಫಿಲ್ಟರ್‌ ಮೂಲಕ ಮಕ್ಕಳು ಪ್ರಾಪ್ತ ಕಂಟೆಂಟ್‌ಗಳನ್ನು ತಮ್ಮ ವಯಸ್ಸಿಗೆ ಅನುಗುಣವಾಗಿ ನೋಡಬಹುದಾಗಿದೆ. ಮೊದಲಿಗೆ ಬೇಟಾ ವರ್ಶನ್‌ನಲ್ಲಿ ಈ ಮೋಡ್ ಲಾಂಚ್‌ ಆಗಲಿದ್ದು, ಬರುವ ದಿನಗಳಲ್ಲಿ ಪೂರ್ಣ ವರ್ಶನ್‌ ಹೊರತರುವ ಚಿಂತನೆಯಲ್ಲಿ ಯೂಟ್ಯೂಬ್ ಇದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...