alex Certify ಅರುಣಾಚಲ ಪ್ರದೇಶ ಚೀನಾಗೆ ಸೇರಿದ್ದು ಎಂದ ಯುಟ್ಯೂಬರ್ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರುಣಾಚಲ ಪ್ರದೇಶ ಚೀನಾಗೆ ಸೇರಿದ್ದು ಎಂದ ಯುಟ್ಯೂಬರ್ ಅರೆಸ್ಟ್

ದೇಶದ್ರೋಹಿ ಹೇಳಿಕೆ ನೀಡಿದ ಆರೋಪದ ಅಡಿಯಲ್ಲಿ ಪಂಜಾಬ್​ ಪೊಲೀಸರು ಪಬ್​ ಜಿ ಸ್ಟ್ರೀಮರ್ ಹಾಗೂ ಯುಟ್ಯೂಬರ್​​ ಪರಾಸ್​ ಸಿಂಗ್​​ ಎಂಬಾತನನ್ನ ಬಂಧಿಸಿದ್ದಾರೆ. ಭಾನುವಾರ ಈತ ಪೋಸ್ಟ್ ಮಾಡಿದ್ದ ವಿಡಿಯೋವೊಂದರಲ್ಲಿ ಅರುಣಾಚಲ ಪ್ರದೇಶ ಚೀನಾಗೆ ಸೇರಿದ ಭಾಗವಾಗಿದೆ ಹಾಗೂ ಶಾಸಕ ನಿನಾಂಗ್​ ಎರಿಂಗ್​​​ ಭಾರತೀಯರಲ್ಲ ಎಂದು ಹೇಳಿದ್ದಾನೆ.‌

ಇನ್ನು ಈ ಸಂಬಂಧ ಟ್ವೀಟ್​ ಮಾಡಿರುವ ಕೇಂದ್ರ ಸಚಿವ ಕಿರಣ್​ ರಿಜಿಜು : ಪಂಜಾಬ್​ ಪೊಲೀಸರು ಪರಾಸ್​ ಸಿಂಗ್​ನನ್ನ ಪತ್ತೆ ಮಾಡಿದ್ದು ಆತನನ್ನ ವಶಕ್ಕೆ ಪಡೆದಿದ್ದಾರೆ. ಅರುಣಾಚಲ ಪ್ರದೇಶ ಪೊಲೀಸರು ಪಂಜಾಬ್​ಗೆ ತಲುಪುತ್ತಿದ್ದಾರೆ. ಇದೊಂದು ಅಂತರಾಜ್ಯ ಪ್ರಕರಣವಾಗಿರೋದ್ರಿಂದ ತುರ್ತು ನ್ಯಾಯಾಂಗ ಬಂಧನಕ್ಕಾಗಿ ನಾನು ಲೂಧಿಯಾನಾದ ಪೊಲೀಸ್​ ಕಮಿಷನರ್​ ಜೊತೆ ಮಾತನಾಡಿದ್ದೇನೆ ಎಂದು ಬರೆದಿದ್ದಾರೆ.

ಅರುಣಾಚಲ ಪ್ರದೇಶ ಪೊಲೀಸರು ಸಿಂಗ್​ ವಿರುದ್ಧ ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅರುಣಾಚಲ ಪ್ರದೇಶ ಸಿಎಂ ಪೇಮಾ ಖಂಡು ಸಹ ಈ ವಿಚಾರವಾಗಿ ಟ್ವೀಟಾಯಿಸಿದ್ದು, ಅರುಣಾಚಲ ಪ್ರದೇಶದ ಜನರಲ್ಲಿ ದ್ವೇಷವನ್ನ ಪ್ರಚೋದಿಸುವ ವಿಡಿಯೋವನ್ನ ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...