ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಶಿಕ್ಷಣ ನೀತಿಯನ್ನು ಇದೇ ವರ್ಷದಿಂದ ಜಾರಿಗೆ ತರಲು ಮುಂದಾಗಿದೆ. ಮೊದಲು ಕೇಂದ್ರೀಯ ವಿದ್ಯಾಲಯಗಳಲ್ಲಿ ಜಾರಿಗೆ ಬರಲಿದ್ದು, ಮುಂದಿನ ವರ್ಷಗಳಲ್ಲಿ ಹಂತ ಹಂತವಾಗಿ ರಾಜ್ಯ ಪಠ್ಯ ಕ್ರಮದ ಶಾಲೆಗಳಲ್ಲೂ ಈ ನೀತಿಯನ್ನು ಜಾರಿಗೆ ತರಲು ಸರ್ಕಾರ ಯೋಜಿಸಿದೆ.
ಕೇವಲ ಇಂಜಿನಿಯರ್, ಡಾಕ್ಟರ್ ಗಳನ್ನು ಸೃಷ್ಟಿಸುವ ಬದಲು ದೇಶದಲ್ಲಿ ವಿಭಿನ್ನ ವೃತ್ತಿಗಳನ್ನು ಮಾಡುವವರನ್ನು ಸೃಷ್ಟಿಸಲು ಹೊಸ ಶಿಕ್ಷಣ ನೀತಿ ಪ್ರೇರೇಪಿಸುತ್ತದೆ.
ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಿದೆ ನಾಳೆಯಿಂದ ಬದಲಾಗಲಿರುವ ಈ ನಿಯಮ
ಹೊಸ ನೀತಿಯ ನಿಯಮಗಳು 6 ನೇ ತರಗತಿಯಿಂದ ಜಾರಿಗೆ ಬರಲಿವೆ. ಸ್ಥಳೀಯವಾಗಿ ಮಹತ್ವ ಪಡೆದ ಉದ್ಯಮಗಳ ಕೌಶಲ್ಯವನ್ನು ಮಕ್ಕಳಿಗೆ ಕಲಿಸಿಕೊಡಲು ಇಲಾಖೆ ಮುಂದಾಗಿದೆ.
ಮರ ಕಸುಬು, ಮಡಿಕೆ ತಯಾರಿಕೆ, ಕೈಮಗ್ಗ ಹೀಗೆ ವಿವಿಧ ಯಶಸ್ವಿ ಉದ್ಯಮಪತಿಗಳ ಜತೆ ಮಕ್ಕಳನ್ನು ಭೇಟಿ ಮಾಡಿಸಲಾಗುತ್ತದೆ. ಉದಾಹರಣೆಗೆ ಸೂರತ್ ನಲ್ಲಿ ಬಟ್ಟೆ ಉದ್ಯಮದ ಬಗ್ಗೆ ಮಕ್ಕಳು ಭೇಟಿ ನೀಡಿ ತಿಳಿದುಕೊಳ್ಳುವರು.