ದೇಶದಲ್ಲಿ ಇಂದಿನಿಂದ 60 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ 45 ವರ್ಷ ಮೇಲಿನ ಅಸ್ವಸ್ಥರಿಗೆ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ. ಈ ಅಭಿಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಲಸಿಕೆ ಸ್ವೀಕರಿಸಿದ್ದಾರೆ.
ಓಡಿಶಾದ ಸಿಎಂ ನಿತೀಶ್ ಕುಮಾರ್ ಕೂಡ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಆದರೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತ್ರ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕೇಂದ್ರ ಸರ್ಕಾರದ ಕ್ರಮವನ್ನ ವಿರೋಧಿಸಿದ್ದಾರೆ.
ನಾನು 70 ವರ್ಷವನ್ನ ದಾಟಿದ್ದೇನೆ. ನೀವು ಲಸಿಕೆಯನ್ನ ಯುವಜನತೆಗೆ ನೀಡಿ. ಯಾಕಂದ್ರೆ ಇನ್ನೂ ಅವರಿಗೆ ಜೀವನವಿದೆ. ನಾನು ಅಬ್ಬಬ್ಬಾ ಅಂದರೆ 10 ರಿಂದ 15 ವರ್ಷ ಬದುಕಬಹುದು ಎಂದು ಹೇಳಿದ್ದಾರೆ.
ಇನ್ನು ಹರಿಯಾಣ ಆರೋಗ್ಯ ಮಂತ್ರಿ ಅನಿಲ್ ವಿಜ್ ಕೂಡ ನನಗೆ ಕೊರೊನಾ ಲಸಿಕೆಯ ಅಗತ್ಯವಿಲ್ಲ ಎಂದು ಟ್ವೀಟಾಯಿಸಿದ್ದಾರೆ. ಅನಿಲ್, ಕೊರೊನಾ ಕಾಯಿಲೆಯಿಂದ ಗುಣಮುಖರಾಗಿದ್ದು ತಮ್ಮ ಆಂಟಿಬಾಡಿ 300ರಷ್ಟಿದೆ ಎಂದು ಹೇಳಿಕೊಂಡಿದ್ದಾರೆ.