ಎಂಜಿಎನ್ಆರ್ಇಜಿಎನಡಿಯಲ್ಲಿ ನೋಂದಾವಣಿ ಮಾಡಿಕೊಂಡ ಕಾರ್ಮಿಕ ಕುಟುಂಬಗಳಿಗೆ 17 ವಿವಿಧ ಯೋಜನೆಗಳನ್ನ ನೀಡಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.
ವರದಿಗಳ ಪ್ರಕಾರ ಉತ್ತರ ಪ್ರದೇಶದ ನೋಂದಾಯಿತ ಕಾರ್ಮಿಕರಿಗೆ ಪಿಂಚಣಿ, ವೈದ್ಯಕೀಯ ಸೌಲಭ್ಯ, ವಸತಿ ನೆರವು ಸೇರಿದಂತೆ ಸಾಕಷ್ಟು ಸೌಲಭ್ಯಗಳು ಸರ್ಕಾರದ ವತಿಯಿಂದ ಲಭಿಸಲಿವೆ.
ಉತ್ತರ ಪ್ರದೇಶ ಗ್ರಾಮೀಣಾಭಿವೃದ್ಧಿ ಇಲಾಖೆಯು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಅಡಿಯಲ್ಲಿ ಕೆಲಸ ಮಾಡುವ 20 ಲಕ್ಷ ಕಾರ್ಮಿಕರನ್ನ ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸುವ ಗುರಿಯನ್ನ ಹೊಂದಿದೆ.
ಈ ವರ್ಷ ಸುಮಾರು 1.4 ಕೋಟಿ ಜನರು ಕೆಲಸ ಮಾಡುತ್ತಿದ್ದಾರೆ. ಎಂಜಿಎನ್‌ಆರ್‌ಇಜಿಎಗೆ ಶೀಘ್ರದಲ್ಲೇ ಎರಡು ದಶಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ನೋಂದಾಯಿಸಲಿರುವುದರಿಂದ ಉತ್ತರ ಪ್ರದೇಶವು ಗರಿಷ್ಠ ಉದ್ಯೋಗ ನೀಡುವ ರಾಜ್ಯವಾಗಿ ಹೊರಹೊಮ್ಮಲಿದೆ ಅಂತಾ ಎಂಜಿಎನ್‌ಆರ್‌ಇಜಿಎ ಹೆಚ್ಚುವರಿ ಆಯುಕ್ತ ಯೋಗೇಶ್ ಕುಮಾರ್ ಹೇಳಿದ್ರು.