ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಯೋಗಿ ಆದಿತ್ಯನಾಥ್ರ ಕಚೇರಿಯ ಕೆಲ ಸಿಬ್ಬಂದಿ ಸೋಂಕಿಗೆ ಒಳಗಾದ ಬಳಿಕ ಯೋಗಿ ಐಸೋಲೇಷನ್ನಲ್ಲಿದ್ದರು. ಇದೀಗ ಯೋಗಿ ಆದಿತ್ಯನಾಥ್ಗೂ ಸೋಂಕು ದೃಢಪಟ್ಟಿದೆ.
ನಿನ್ನೆ ಯೋಗಿ ಆದಿತ್ಯನಾಥ್, ತಮ್ಮ ಕಚೇರಿಯ ಸಿಬ್ಬಂದಿ ಕೊರೊನಾ ಸೋಂಕಿಗೆ ಒಳಗಾಗಿರೋದ್ರಿಂದ ಮುಂಜಾಗ್ರತಾ ಕ್ರಮವಾಗಿ ತಾವು ಐಸೋಲೇಷನ್ನಲ್ಲಿ ಇರಲಿದ್ದೇನೆ ಎಂದು ಟ್ವೀಟಾಯಿಸಿದ್ದರು.
ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದಲ್ಲಿ 18,021 ಕೊರೊನಾ ಕೇಸ್ಗಳು ವರದಿಯಾಗಿವೆ. ಹಾಗೂ 85 ಮಂದಿ ಮಂಗಳವಾರ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ 80 ಲಕ್ಷ ಮಂದಿ ಕೊರೊನಾ ಲಸಿಕೆಯನ್ನ ಪಡೆದಿದ್ದಾರೆ.