ಕೊರೊನಾ ಸಂದರ್ಭದಲ್ಲಿ ಜಿಮ್ ಗೆ ಹೋಗಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಸ್ವಲ್ಪ ಮಟ್ಟಿಗಿನ ರಿಸ್ಕ್ ಕೆಲಸ. ಹೀಗಾಗಿ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಯೋಗ ಬಹಳ ಒಳ್ಳೆಯದು. ಬಹಳ ಜನರಿಗೆ ಯೋಗ ಹಣ ಸಂಪಾದಿಸುವ ಒಳ್ಳೆ ಮಾರ್ಗವಾಗಿದೆ. ಯೋಗ ಶಿಬಿರಗಳು ವಿಶ್ವದಾದ್ಯಂತ ವ್ಯಾಪಿಸಿವೆ.
ಆರೋಗ್ಯ ಹಾಗೂ ಫಿಟ್ನೆಸ್ ಕ್ಷೇತ್ರದಲ್ಲಿ ಯೋಗಕ್ಕೆ ಮಹತ್ವ ಹೆಚ್ಚಾಗುತ್ತಲೇ ಇದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಯತ್ನದಿಂದ ವಿಶ್ವಸಂಸ್ಥೆ ಜೂನ್ 21 ನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಣೆ ಮಾಡಿದೆ. ಇದಾದ ಮೇಲೆ ಯೋಗಕ್ಕೆ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಅನೇಕರು ಯೋಗವನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಯೋಗ ದಿವಸ ಘೋಷಣೆಯಾದ ಮೇಲೆ ಯೋಗದ ಬಗ್ಗೆ ಹೆಚ್ಚು ಪ್ರಚಾರ ಮಾಡುವ ಅಗತ್ಯವಿಲ್ಲ. ಜನರೇ ಯೋಗವನ್ನು ಅರಸಿ ಬರ್ತಿದ್ದಾರೆ. ಪ್ರತಿ ವರ್ಷ ಯೋಗ ಕಲಿಯುವವರ ಸಂಖ್ಯೆ ಹೆಚ್ಚಾಗ್ತಿದೆ. ಅಂದಾಜಿನ ಪ್ರಕಾರ ವಿಶ್ವದಲ್ಲಿ ಯೋಗ ಉದ್ಯಮ 80 ಅರಬ್ ಡಾಲರ್ ತಲುಪಿದೆಯಂತೆ.