
ಒಮ್ಮೊಮ್ಮೆ ಇದು ಎಷ್ಟರ ಮಟ್ಟಿಗೆ ನಾಟಕೀಯವಾಗಿ ಇರುತ್ತೆ ಅಂದರೆ ಗಂಭೀರವಾದ ದೃಶ್ಯಗಳೂ ನಗು ತರಿಸಿ ಬಿಡುತ್ತವೆ.
ಸಸುರಾಲ್ ಸೀಮರ್ ಕಾ ಎಂಬ ಹಿಂದಿಯ ಪ್ರಖ್ಯಾತ ಧಾರವಾಹಿಯ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಧಾರವಾಹಿಯ ಗಂಭೀರ ದೃಶ್ಯವೊಂದು ಇದೀಗ ಟ್ರೋಲಿಗರ ಪಾಲಿಗೆ ಕಾಮಿಡಿ ಆಗಿಬಿಟ್ಟಿದೆ.
ಇದರಲ್ಲಿ ಮಾತಾಜಿ ಎಂಬ ಮಹಿಳೆ ಮನೆಯ ಮುಖ್ಯ ಸದಸ್ಯೆಯಾಗಿರುತ್ತಾಳೆ. ಆಕೆಯ ಜೊತೆ ಆಕೆಯ ಮೊಮ್ಮಗಳು ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿರುತ್ತಾಳೆ. ಈ ವೇಳೆ ಮಾತಾಜಿಯ ಕೈಲಿದ್ದ ಶಾಲು ಆಕೆಯ ಕುತ್ತಿಗೆಗೆ ಹೋಗಿ ಸುತ್ತಿಕೊಳ್ಳುತ್ತೆ. ಹಾಗೂ ಪರಿ ಎಂಬಾಕೆ ಅದರಿಂದ ತಪ್ಪಿಸಿಕೊಳ್ಳೋಕೆ ಹೆಣಗಾಡುತ್ತಾಳೆ. ಈ ದೃಶ್ಯ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ.
https://twitter.com/i/status/1355003815112695808
