ಮುಂಬೈ ಹಾಗೂ ಪುಣೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 100 ರೂ. ಗೂ ಅಧಿಕ ಧಾರಣೆಯಿದ್ದು, ನಾಶಿಕ್ನ ಹೋಲ್ಸೇಲ್ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿರುವುದು ಇದಕ್ಕೆ ಕಾರಣವಾಗಿದೆ.
ನಿರಂತರ ಮಳೆ ಕಾರಣ ಈರುಳ್ಳಿ ಪೂರೈಕೆ ಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮದ ಕಾರಣ ಕಳೆದ ವಾರ 70ರೂ./ಕೆಜಿ ಇದ್ದ ಈರುಳ್ಳಿ ಬೆಲೆ ಈ ವಾರ 120ರೂ./ಕೆಜಿ ಮುಟ್ಟಿದೆ. ದಿಢೀರ್ ಬೆಲೆ ಏರಿಕೆ ಕಾರಣ ಗ್ರಾಹಕರು ಈರುಳ್ಳಿಯನ್ನು ಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡುವಂತಾಗಿದೆ.
ಈರುಳ್ಳಿ ಬೆಲೆ ಕುರಿತಂತೆ ದಿನಕ್ಕೊಂದು ರಂಗುರಂಗಿನ ಮೆಮೆಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.