ದೇಶದಲ್ಲಿ ಕೊರೊನಾ ಎರಡನೇ ಅಲೆ ಬೀಸಿದ್ದು ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ದೇಶದಲ್ಲಿ ಕೊರೊನಾ ಭಯ ಜಾಸ್ತಿ ಆಗ್ತಾ ಇದ್ದರೂ ಸಹ ಜನತೆ ಮಾತ್ರ ಕಾಳಜಿ ವಹಿಸುತ್ತಿರುವಂತೆ ಕಾಣುತ್ತಿಲ್ಲ. ಎಷ್ಟೋ ಮಂದಿ ಮಾಸ್ಕ್ ಧರಿಸೋದು ಹಾಗೂ ಸಾಮಾಜಿಕ ಅಂತರವನ್ನ ಕಾಪಾಡೋದನ್ನ ಮರೆತಿರುವಂತೆ ವರ್ತಿಸುತ್ತಿದ್ದಾರೆ.
ಕೊರೊನಾ ವೈರಸ್ ತಡೆಗಾಗಿ ಈಗಾಗಲೇ ಅನೇಕ ರಾಜ್ಯಗಳು ನೈಟ್ ಕರ್ಫ್ಯೂ, ವೀಕೆಂಡ್ ಲಾಕ್ಡೌನ್ನಂತಹ ಸಾಕಷ್ಟು ಕ್ರಮಗಳನ್ನ ಜಾರಿಗೆ ತರ್ತಿವೆ. ಸರ್ಕಾರದ ಜೊತೆಯಲ್ಲಿ ಕೆಲ ಪ್ರಜ್ಞಾವಂತ ನಾಗರಿಕರೂ ಸಹ ತಮ್ಮದೇ ಆದ ರೀತಿಯಲ್ಲಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ.
ಮೊರಾದಾಬಾದ್ನ ವ್ಯಕ್ತಿ ಯಮನಂತೆ ವೇಷವನ್ನ ಧರಿಸಿ ನಗರಾದ್ಯಂತ ಸಂಚಾರ ನಡೆಸಿದ್ದಾರೆ. ಕೈಯಲ್ಲಿ ಧ್ವನಿವರ್ಧಕ ರೀತಿಯ ಸಾಧನ ಹಿಡಿದಿರುವ ಈ ಯಮರಾಜ, ಜನರಿಗೆ ಮಾಸ್ಕ್ ಧರಿಸುವ ಹಾಗೂ ಸಾಮಾಜಿಕ ಅಂತರ ಕಾಪಾಡುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಧರಣಿ ವಾಸಿಗಳೇ, ನಮಗೆ ವರ್ಕ್ ಲೋಡ್ ಜಾಸ್ತಿ ಮಾಡಬೇಡಿ. ಮಾಸ್ಕ್ ಹಾಕಿಕೊಳ್ಳಿ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಬರೆಯಲಾದ ಧ್ವನಿವರ್ಧಕವನ್ನ ಹಿಡಿದುಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡ್ತಿದ್ದಾರೆ.
ದೇಶದಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಲೇ ಇರೋದ್ರಿಂದ ನಾನು ಈ ವಿಧಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಈ ಸಂದರ್ಭದಲ್ಲಿ ಮಾಸ್ಕ್ ಧರಿಸೋದು ಹಾಗೂ ಸಾಮಾಜಿಕ ಅಂತರ ಕಾಪಾಡೋದು ತುಂಬಾನೇ ಮುಖ್ಯ ಎಂದು ಯಮರಾಜನ ವೇಷ ಧರಿಸಿದ್ದ ವ್ಯಕ್ತಿ ಹೇಳಿದ್ರು.