ಜಗತ್ತು ಎಷ್ಟೇ ಆಧುನಿಕತೆಯತ್ತ ವಾಲಿರಲಿ ಆದರೆ ಇನ್ನೂ ವಿಶ್ವದ ಅನೇಕ ರಾಷ್ಟ್ರಗಳು ನೀರಿನ ಅಭಾವವನ್ನ ಎದುರಿಸುತ್ತಿವೆ. ಹೀಗಾಗಿ ವಿಶ್ವದಲ್ಲಿ ನೀರಿನ ಪ್ರಾಮುಖ್ಯತೆಯನ್ನ ಸಾರುವ ಸಲುವಾಗಿಯೇ ಸೋಮವಾರದಂದು ವಿಶ್ವ ಜಲ ದಿನ ಎಂದು ಆಚರಿಸಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ನೀರಿನ ಮಹತ್ವವನ್ನ ಸಾರುವ ಸಾಕಷ್ಟು ಪೋಸ್ಟ್ಗಳು ವೈರಲ್ ಆಗಿವೆ. ಟ್ವೀಟಿಗರೊಬ್ಬರು ನೀರು ಪ್ರಕೃತಿಯ ಲಭ್ಯವಿರುವ ಅವಶ್ಯಕ ವಸ್ತುಗಳಲ್ಲಿ ಒಂದಾಗಿದೆ. ಹೀಗಾಗಿ ನಾವಿದನ್ನ ಏನಾದರೂ ಪ್ರಯತ್ನ ಪಟ್ಟು ರಕ್ಷಣೆ ಮಾಡಲೇಬೇಕು ಎಂದು ಬರೆದುಕೊಂಡಿದ್ದಾರೆ.
ಅದೇ ರೀತಿ ಇನ್ನೊಬ್ಬ ವ್ಯಕ್ತಿ ನೀರಿಗಿಂತ ಅಮೂಲ್ಯವಾದ ವಸ್ತು ಜಗತ್ತಿನಲ್ಲಿ ಮತ್ತೊಂದಿಲ್ಲ ಎಂದು ಹೇಳಿದ್ದಾರೆ. ಇದೇ ರೀತಿ ಇನ್ನೂ ಹೆಚ್ಚಿನ ಮಂದಿ ನಾನಾ ಬಗೆಯಲ್ಲಿ ನೀರಿನ ಮಹತ್ವವನ್ನ ವರ್ಣನೆ ಮಾಡಿದ್ದಾರೆ. ಈ ಪೋಸ್ಟ್ಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ.