4 ಕಿ.ಮೀ. ದೂರ ಸಾಗಲು 10 ಸಾವಿರ ರೂ. ಬಿಲ್: ಆಂಬುಲೆನ್ಸ್ ಮಾಲೀಕನ ವಿರುದ್ದ ಆಕ್ರೋಶ 01-05-2021 7:25AM IST / No Comments / Posted In: Latest News, India ಡೆಡ್ಲಿ ವೈರಸ್ನಿಂದ ಪರಿತಪಿಸುತ್ತಿರುವ ಜನರ ಪ್ರಾಣವನ್ನ ಕಾಪಾಡಲು ಇಡೀ ವೈದ್ಯ ಲೋಕವೇ ಶ್ರಮಿಸುತ್ತಿದೆ . ಈ ನಡುವೆ ಆಂಬುಲೆನ್ಸ್, ಆಕ್ಸಿಜನ್ ಸಿಲಿಂಡರ್ ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯಗಳ ಕೊರತೆ ಉಂಟಾಗ್ತಿದೆ. ಈ ಕಠಿಣ ಸಂದರ್ಭದಲ್ಲಿ ಅನೇಕರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರೆ ಇನ್ನೂ ಹಲವರು ಇದೇ ಪರಿಸ್ಥಿತಿಯ ಲಾಭವನ್ನ ಪಡೆಯುತ್ತಿದ್ದಾರೆ. ಈ ಮಾತಿಗೆ ಸಾಕ್ಷಿ ಎಂಬಂತೆ ಗಂಭೀರ ಲಕ್ಷಣವನ್ನ ಹೊಂದಿರುವ ಕೋವಿಡ್ ರೋಗಿಯನ್ನ ಆಂಬುಲೆನ್ಸ್ನಲ್ಲಿ ನಾಲ್ಕು ಕಿಲೋಮೀಟರ್ ದೂರ ಸಾಗಿಸಲು 10 ಸಾವಿರ ರೂಪಾಯಿ ಬಿಲ್ ಮಾಡಲಾಗಿದೆ. ಮಾನವೀಯ ಮೌಲ್ಯವನ್ನೇ ಕಳೆದುಕೊಂಡ ಕೆಲ ಆಂಬುಲೆನ್ಸ್ ಚಾಲಕರಿಂದಾಗಿ ದೆಹಲಿ ಜನತೆ ಪರಿತಪಿಸುವಂತಾಗಿದೆ. ಗಮನಿಸಿ: ನಾಳೆಯಿಂದ ಬದಲಾಗಲಿದೆ ಈ ಎಲ್ಲ ನಿಯಮ ಡಿ.ಕೆ. ಆಂಬುಲೆನ್ಸ್ ಸರ್ವೀಸ್ ಗೆ ಸೇರಿದ 10 ಸಾವಿರ ರೂಪಾಯಿಗಳ ರಶೀದಿಯ ಫೋಟೋವನ್ನ ಐಪಿಎಸ್ ಅಧಿಕಾರಿ ಅರುಣ್ ಬೋಥ್ರಾ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ದೆಹಲಿಯಲ್ಲಿ ಕೇವಲ ನಾಲ್ಕು ಕಿಲೋಮೀಟರ್ ದೂರಕ್ಕೆ 10 ಸಾವಿರ ರೂಪಾಯಿಯನ್ನ ಪಡೆಯಲಾಗಿದೆ. ಇಡೀ ವಿಶ್ವವೇ ಇಂದು ನಮ್ಮನ್ನ ನೋಡುತ್ತಿದೆ ಎಂದು ಶೀರ್ಷಿಕೆ ನೀಡಿದ್ದಾರೆ. ಬೋಥ್ರಾರ ಟ್ವೀಟ್ 61 ಸಾವಿರಕ್ಕೂ ಹೆಚ್ಚು ಲೈಕ್ ಹಾಗೂ 19 ಸಾವಿರ ರಿಟ್ವೀಟ್ಗಳನ್ನ ಗಳಿಸಿದೆ. ಈ ಬಳಿಕ ಟ್ವೀಟಿಗರೂ ಸಹ ಈ ರೀತಿಯ ಅನೇಕ ಘಟನೆಗಳನ್ನ ಶೇರ್ ಮಾಡಿದ್ದಾರೆ. Ten thousand rupees for a distance of four kms. Ambulance rental in Delhi. The world is watching us today. Not only the devastation but also our moral values. pic.twitter.com/dZoJpSbF6c — Arun Bothra 🇮🇳 (@arunbothra) April 28, 2021