ಮುಂಬೈ: ಕೊರೊನಾ ವೈರಸ್ ಹಲವು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಕಾರ್ಯನಿರ್ವಹಣೆ ಮಾಡುವಂತೆ ಮಾಡಿದೆ. ಈ ಸ್ನೇಹಿತರು ಅದನ್ನು “ವರ್ಕ್ ಫ್ರಂ ಸೈಕಲ್” ಎಂದು ಬದಲಿಸಿದ್ದಾರೆ. ತಮ್ಮ ಕಚೇರಿ ಕೆಲಸ ನಿರ್ವಹಿಸುತ್ತಲೇ ಮುಂಬೈನಿಂದ ಕನ್ಯಾಕುಮಾರಿವರೆಗೆ ಸಾಹಸಮಯ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ.
ಬೆಕೆನ್ ಜಾರ್ಜ್, ಅಲ್ವಯನ್ ಜೋಸೆಫ್ ಹಾಗೂ ರಿತೀಶ್ ಬಾಲರಾವ್ ಕಳೆದ ನವೆಂಬರ್ ನಲ್ಲಿ ಮುಂಬೈನಿಂದ ಹೊರಟು 1687 ಕಿಮೀ ದೂರದ ಕನ್ಯಾಕುಮಾರಿಯನ್ನು ಇತ್ತೀಚೆಗೆ ತಲುಪಿದ್ದಾರೆ.
ಸ್ನೇಹಿತರು ಬೆಳಗ್ಗೆ 4 ಗಂಟೆಗೆ ಎದ್ದು, ಸೈಕಲ್ ತುಳಿಯುತ್ತಿದ್ದರು. ದಿನಕ್ಕೆ 80 ಕಿಮೀವರೆಗೂ ಸಂಚರಿಸುತ್ತಿದ್ದರು. ನಡುವೆ ತಮ್ಮ ಕಚೇರಿ ಕಾರ್ಯವನ್ನೂ ಲ್ಯಾಪ್ ಟಾಪ್ ನಲ್ಲಿ ಮಾಡುತ್ತ ಬಂದಿದ್ದರು. ವೀಕೆಂಡ್ ಗಳಲ್ಲಿ ಹೆಚ್ಚಿನ ದೂರ ಕ್ರಮಿಸಿದ್ದರು.
ಒಂದೇ ಕಡೆ ಇದ್ದು ನಕಾರಾತ್ಮಕ ಆಲೋಚನೆಗಳು ಬರುತ್ತವೆ. ಇದರಿಂದ ವರ್ಕ್ ಫ್ರಂ ಸೈಕಲ್ ಯೋಜನೆಯನ್ನು ಸ್ನೇಹಿತರು ಸೇರಿ ರೂಪಿಸಿದೆವು ಎಂಬುದು ಬೆಕೆನ್ ಜಾರ್ಜ್(30)ಅಭಿಪ್ರಾಯ.