ಬಿಜೆಪಿ ವಿರುದ್ಧ ಆಕ್ರೋಶದ ಸುರಿಮಳೆಯನ್ನೇ ಹೊರಿಸುತ್ತಿರುವ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇದೀಗ ಮತ್ತೊಮ್ಮೆ ಕೇಸರಿ ಪಕ್ಷದ ವಿರುದ್ಧ ಕೆಂಡಕಾರಿದ್ದಾರೆ. ಪಶ್ಚಿಮ ಬಂಗಾಳವನ್ನ ನಾನು ಎಂದಿಗೂ ಗುಜರಾತ್ ಆಗಲು ಬಿಡೋದಿಲ್ಲ ಅಂತಾ ಸವಾಲೆಸೆದಿದ್ದಾರೆ.
ನಾವು ನಮ್ಮ ನೆಲವನ್ನ ರಕ್ಷಿಸಬೇಕಾಗಿದೆ. ನಮ್ಮ ಬಂಗಾಳವನ್ನ ನಾಶ ಮಾಡೋಕೆ ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಬಂಗಾಳವನ್ನ ಮತ್ತೊಂದು ಗುಜರಾತ್ ಆಗಲು ನಾವೆಂದಿಗೂ ಬಿಡೋದಿಲ್ಲ ಎಂದು ಗುಡುಗಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ 2 ದಿನದ ಬಂಗಾಳ ಭೇಟಿಯ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಕೇಂದ್ರದ ಯೋಜನೆಗಳನ್ನ ಪಶ್ಚಿಮ ಬಂಗಾಳದ ಬಡವರಿಗೆ ತಲುಪಿಸುತ್ತಿಲ್ಲ ಎಂದು ಆರೋಪ ಮಾಡಿದ್ದರು. ಇದಾದ ಬಳಿಕ ಮಮತಾ ಕೇಂದ್ರದ ವಿರುದ್ಧ ಬಲವಾದ ಆರೋಪಗಳನ್ನ ಮಾಡುತ್ತಲೇ ಬಂದಿದ್ದಾರೆ.