ಮಹಿಳಾ ಸಬಲೀಕರಣ ಹಾಗೂ ಮಾಲಿನ್ಯ ರಹಿತ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬಿಹಾರ ಹಾಗೂ ಉತ್ತಾರಖಂಡ್ನ ಇಬ್ಬರು ಯುವತಿಯರು ವಾಘಾ ಗಡಿಯಿಂದ ಅರುಣಾಚಲ ಪ್ರದೇಶದವರೆಗೆ ಸೈಕ್ಲಿಂಗ್ ಕೈಗೊಂಡಿದ್ದಾರೆ.
ಮಹಿಳಾ ಸಬಲೀಕರಣದ ಬಗ್ಗೆ ಸಂದೇಶ ರವಾನಿಸೋದು ನಮ್ಮ ಮುಖ್ಯ ಗುರಿಯಾಗಿತ್ತು. ನಾವು ಅರುಣಾಚಲ ಪ್ರದೇಶದವರೆಗೂ ಸೈಕ್ಲಿಂಗ್ ನಡೆಸಲಿದ್ದೇವೆ. ಉತ್ತರಾಖಂಡ್ ಸರ್ಕಾರ ನಮ್ಮ ಈ ಪ್ರಯತ್ನಕ್ಕೆ ಸಾಥ್ ನೀಡ್ತಿದೆ ಎಂದು ಸ್ಲೈಕಿಸ್ಟ್ ಸುರುತಿ ರಾವತ್ ಹೇಳಿದ್ದಾರೆ.
ನಾನು ಉತ್ತರಕಾಶಿ ಜಿಲ್ಲೆಗೆ ಸೇರಿದವಳು. ಸ್ವಚ್ಛ ಹಿಮಾಲಯ ಹಾಗೂ ಮಹಿಳಾ ಸಬಲೀಕರಣ ಸಂದೇಶವನ್ನ ಸಾರಬೇಕು ಅನ್ನೋದು ನಮ್ಮ ಉದ್ದೇಶವಾಗಿದೆ. ನಮ್ಮ ಪ್ರಯಾಣದ ವೇಳೆ ಅನೇಕರ ಜೊತೆ ಸಂವಹನ ನಡೆಸಲಿದ್ದೇವೆ ಎಂದು ಸುರುತಿ ಹೇಳಿದ್ದಾರೆ.
5 ಸಾವಿರ ಕಿಲೋಮೀಟರ್ನ ಈ ಪ್ರಯಾಣದಲ್ಲಿ ಇಬ್ಬರು ಯುವತಿಯರು 5 ರಾಜ್ಯಗಳನ್ನ ದಾಟಲಿದ್ದಾರೆ. ಬಿಎಸ್ಎಫ್ ನಿರ್ದೇಶಕ ಭೂಪಿಂದರ್ ಸಿಂಗ್ ಇವರಿಬ್ಬರ ಪ್ರಯಾಣಕ್ಕೆ ಹಸಿರು ಬಾವುಟ ತೋರಿಸಿದ್ರು.