ದೆಹಲಿ ಗಡಿಯಲ್ಲಿ ಪ್ರತಿಭಟನೆಯಲ್ಲಿ ನಿರತರಾದ ರೈತರ ಪ್ರತಿಭಟನೆಗೆ ನಾರೀಶಕ್ತಿ ಬಂದಿದ್ದು, ’ಮಹಿಳಾ ರೈತರ ದಿವಸ’ದಂದು ಪ್ರತಿಭಟನೆಯ ಅಷ್ಟೂ ಜವಾಬ್ದಾರಿಯನ್ನೂ ಹೊರಲು ಮಹಿಳೆಯರು ಸೇರಿಕೊಂಡಿದ್ದಾರೆ.
ಕೇಂದ್ರದ ಕೃಷಿ ಸುಧಾರಣಾ ಕಾಯಿದೆಯನ್ನು ವಿರೋಧಿಸಿ ಕಳೆದ 50 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗೆ ಇನ್ನಷ್ಟು ಬಲ ತುಂಬಲು ದೇಶದ ಅನೇಕ ರಾಜ್ಯಗಳಿಂದ ಈ ಮಹಿಳೆಯರು ಬಂದಿದ್ದಾರೆ ಎನ್ನಲಾಗಿದೆ. ಮುಖ್ಯವಾಗಿ ಪಂಜಾಬ್ ಹಾಗೂ ಹರಿಯಾಣಗಳಿಂದ ಬಂದಿರುವ ರೈತರು ಸಿಂಘು ಗಡಿಯಲ್ಲಿ ಬೀಡು ಬಿಟ್ಟಿದ್ದಾರೆ.
ಮಹಿಳಾ ರೈತರ ದಿವಸಕ್ಕೆಂದು ಸಾಂಕೇತಿಕವಾಗಿ ಬಂದಿದ್ದ ಮಹಿಳೆಯರು ಆ ದಿನದ ಪ್ರತಿಭಟನೆ ಅಷ್ಟೂ ಕೆಲಸ – ಸ್ವಸಹಾಯಕರ ನಡುವೆ ಹೊಂದಾಣಿಕೆಯಿಂದ ಹಿಡಿದು ಎಲ್ಲವನ್ನೂ ನಿಭಾಯಿದ್ದಾರೆ ಎನ್ನುತ್ತಾರೆ ಅಖಿಲ ಭಾರತ ರೈತ ಸಂಘರ್ಷ ಸಹಕಾರ ಸಮಿತಿಯ ಕವಿರಾ ಕುರುಗಂತಿ.